ಕರ್ನಾಟಕ

karnataka

ETV Bharat / city

ಉಳ್ಳಾಲ ದರ್ಗಾದಲ್ಲಿ ಭ್ರಷ್ಟಾಚಾರ ನಡೆದಿದ್ದಕ್ಕೆ ಅಧಿಕಾರಿ ನೇಮಿಸಲಾಗಿದೆ: ಅನ್ವರ್​​ ಮಾಣಿಪ್ಪಾಡಿ - mangliore Anwar Manipadi news

ಮಂಗಳೂರು ನಗರದ ಉಳ್ಳಾಲ ಜುಮಾ ಮಸೀದಿ ಹಾಗೂ ಸೈಯದ್ ಮದನಿ ದರ್ಗಾದ ಹಿಂದಿನ ಆಡಳಿತವನ್ನು ಸರ್ಕಾರ ಬರ್ಖಾಸ್ತುಗೊಳಿಸಿ ಹೊಸ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ.

ಅನ್ವರ್ ಮಾಣಿಪ್ಪಾಡಿ ಪ್ರತಿಕ್ರಿಯೆ
ಅನ್ವರ್ ಮಾಣಿಪ್ಪಾಡಿ ಪ್ರತಿಕ್ರಿಯೆ

By

Published : Dec 8, 2019, 2:11 PM IST

ಮಂಗಳೂರು: ನಗರದ ಉಳ್ಳಾಲ ಜುಮಾ ಮಸೀದಿ ಹಾಗೂ ಸೈಯದ್ ಮದನಿ ದರ್ಗಾದ ಹಿಂದಿನ ಆಡಳಿತವನ್ನು ಸರ್ಕಾರ ಬರ್ಖಾಸ್ತುಗೊಳಿಸಿ ಹೊಸ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ.

ಅನ್ವರ್ ಮಾಣಿಪ್ಪಾಡಿ ಪ್ರತಿಕ್ರಿಯೆ

ಈ ಬಗ್ಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಮಾತನಾಡಿ, ಯಾವುದಾದರು ಮಸೀದಿ, ದರ್ಗಾ, ವಕ್ಫ್ ಸಂಸ್ಥೆಗಳಿಗೆ ಸರ್ಕಾರ ಅಧಿಕಾರಿಯನ್ನು ಕಳುಹಿಸಿಕೊಡಬೇಕಾದರೆ ಅಲ್ಲಿ ಖಂಡಿತಾ ಭ್ರಷ್ಟಾಚಾರ ನಡೆದಿದೆ. ಜೊತೆಗೆ ಅನೇಕ ಕೃತ್ಯಗಳು ಅಲ್ಲಿ ನಡೆದಿವೆ ಎಂದು ಹೇಳಿದರು.

ನಾನು ಒಂಭತ್ತು ವರ್ಷಗಳಿಂದ ಹೋರಾಟ ಮಾಡಿಕೊಂಡು ಎಲ್ಲೆಲ್ಲಿ ಭ್ರಷ್ಟಾಚಾರ ನಡೆದಿದೆ ಅದನ್ನು ಹೇಳಿದ್ದೇನೆ. ದಕ್ಷಿಣ ಭಾರತದ ಅಜ್ಮಿರ್ ಎಂದೇ ಪ್ರಖ್ಯಾತವಾದ ದರ್ಗಾ ಇದು. ನಮ್ಮ ದ.ಕ ಜಿಲ್ಲೆಯವರು ಪ್ರಾಮಾಣಿಕರು ಎಂದು ಹೆಸರುವಾಸಿ. ಆದರೆ ಇದು ಯಾಕೆ ಹೀಗಾಯಿತು ಎಂಬ ಬೇಸರವೂ ಇದೆ. ಇದನ್ನು ಸರಿಗೊಳಿಸಬೇಕಾದರೆ ವಕ್ಛ್ ಬೋರ್ಡ್​ನವರೇ ಬರಬೇಕು. ಒಳ್ಳೆಯ ಆಡಳಿತ ಅಧಿಕಾರಿಯನ್ನೇ ನೇಮಿಸಲಾಗಿದೆ. ಮುಂದಕ್ಕೆ ಒಳ್ಳೆಯ ಫಲಿತಾಂಶ ಬರಬಹುದು ಅಂದ್ಕೊಂಡಿದ್ದೇನೆ. ಇಲ್ಲಿನ ಅವ್ಯವಹಾರಗಳಿಗೆ ಕಡಿವಾಣ ಹಾಕಬೇಕಾದರೆ ಚುನಾವಣೆ ನಡೆದು ಹೊಸ ಕಮಿಟಿ ಬರಬೇಕು. ಇಲ್ಲಿನ ದರ್ಗಾದಲ್ಲಿ ತಿಂಗಳಿಗೆ 25-30 ಲಕ್ಷ ರೂ. ಕೇವಲ ಹುಂಡಿಯಲ್ಲಿ ಸಂಗ್ರಹವಾಗುತ್ತದೆ ಎಂದು ಅನ್ವರ್ ಮಾಣಿಪ್ಪಾಡಿ ಹೇಳಿದರು.

ABOUT THE AUTHOR

...view details