ಕರ್ನಾಟಕ

karnataka

ETV Bharat / city

ತನ್ನೊಂದಿಗೆ ಮದುವೆಯಾಗಬೇಕಿದ್ದ ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿದ ಮಂಗಳೂರಿನ ಭೂಪ.. ಅವನೊಬ್ಬ ಸಲಿಂಗಕಾಮಿ!? - ಮಂಗಳೂರು ಅಪರಾಧ,

ತನ್ನೊಂದಿಗೆ ಮದುವೆಯಾಗಬೇಕಾಗಿದ್ದ ಯುವತಿಗೆ ಯುವಕನೊಬ್ಬ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ. ಆದ್ರೆ ಯುವತಿಗೆ ಅವನೊಬ್ಬ ಸಲಿಂಗಕಾಮಿ ಎಂಬ ಶಂಕೆ ವ್ಯಕ್ತವಾಗಿದೆ. ಬಳಿಕ ಯುವಕನ ಕಿರುಕುಳಕ್ಕೆ ಬೇಸತ್ತು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

accused of sending obscene messages, accused of sending obscene messages to young woman, Mangaluru crime, Mangaluru crime news, ಅಶ್ಲೀಲ ಸಂದೇಶ ಕಳುಹಿಸಿದ ಆರೋಪಿ, ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪಿ, ಮಂಗಳೂರು ಅಪರಾಧ, ಮಂಗಳೂರು ಅಪರಾಧ ಸುದ್ದಿ,
ಭಾವಿ ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪಿ

By

Published : Nov 9, 2021, 10:53 AM IST

ಮಂಗಳೂರು: ಮದುವೆ ನಿಗದಿಯಾಗಿದ್ದ ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಕುದ್ರೋಳಿ ನಿವಾಸಿ ಶ್ರೀನಿವಾಸ ಭಟ್ (35) ಬಂಧಿತ ಆರೋಪಿ.

ಆರೋಪಿ ಶ್ರೀನಿವಾಸ ಭಟ್ ಜೊತೆ ನಗರದ ಯುವತಿಯೊಂದಿಗೆ ಮದುವೆ ಮಾತುಕತೆ ನಡೆದಿತ್ತು. ಇವರ ಎರಡು ಕುಟುಂಬಗಳು ಮದುವೆಗೆ ಒಪ್ಪಿಗೆಯನ್ನು ಸೂಚಿಸಿ ನಿಶ್ಚಿತಾರ್ಥಕ್ಕೆ ದಿನವನ್ನು ನಿಗದಿಪಡಿಸಿದ್ದರು. ಈ ಮಧ್ಯೆ ಯುವಕನು ಯುವತಿಯ ಮೊಬೈಲ್ ನಂಬರ್ ಪಡೆದುಕೊಂಡು ಚಾಟಿಂಗ್ ಆರಂಭಿಸಿದ್ದಾನೆ.

ಯುವತಿಗೆ ಅಶ್ಲೀಲ ಸಂದೇಶ, ವಿಚಿತ್ರ ಸಂದೇಶಗಳನ್ನು ಹಾಕುತ್ತಿದ್ದ. ತಾನೊಬ್ಬ ಸಲಿಂಗಕಾಮಿ ಎಂಬ ರೀತಿಯಲ್ಲಿ ಸಂದೇಶ ಕಳುಹಿಸುತ್ತಿದ್ದ ಎಂಬುದು ಯುವತಿಯ ಆರೋಪವಾಗಿದೆ. ಈತನ ವಿಚಿತ್ರ ಸಂದೇಶದ ಹಿನ್ನೆಲೆ ನಿಶ್ಚಿತಾರ್ಥವನ್ನು ಯುವತಿ ಮನೆಯವರು ಮುಂದೂಡಿದ್ದರು. ಇದರ ಬಳಿಕವು ಆತ ಅಶ್ಲೀಲ ಸಂದೇಶ ಕಳುಹಿಸುವುದನ್ನು ಮುಂದುವರಿಸಿದ್ದ. ಈತನ ಮಾನಸಿಕ ಕಿರುಕುಳಕ್ಕೆ ನೊಂದ ಯುವತಿ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಆರೋಪಿ ಶ್ರೀನಿವಾಸ್​ ಭಟ್​ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ABOUT THE AUTHOR

...view details