ಮಂಗಳೂರು: ಅತ್ತಾವರದಲ್ಲಿರುವ ಆದಾಯ ತೆರಿಗೆ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿ ಕೆಲ ದಾಖಲೆ ಪತ್ರಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಮಂಗಳೂರಿನ ಐಟಿ ಕಚೇರಿಯಲ್ಲಿ ಆಕಸ್ಮಿಕ ಬೆಂಕಿ: ದಾಖಲೆ ಪತ್ರಗಳು ಅಗ್ನಿಗಾಹುತಿ - fire at an IT office
ಇಲ್ಲಿನ ಆದಾಯ ತೆರಿಗೆ ಕಚೇರಿ ಕಟ್ಟಡದ ಕೋಣೆಯೊಂದರ ಎಸಿಯಲ್ಲಿ ಶಾರ್ಟ್ ಸಕ್ಯೂಟ್ ಆಗಿ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಕಚೇರಿಯ ಕೆಲ ದಾಖಲೆ ಪತ್ರಗಳು ಬೆಂಕಿಗಾಹುತಿಯಾಗಿವೆ.
ಆಕಸ್ಮಿಕ ಬೆಂಕಿ
ಇಲ್ಲಿನ ಆದಾಯ ತೆರಿಗೆ ಕಚೇರಿ ಕಟ್ಟಡದ ಕೋಣೆಯೊಂದರ ಎಸಿಯಲ್ಲಿ ಶಾರ್ಟ್ ಸಕ್ಯೂಟ್ ಆಗಿ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಕಚೇರಿಯ ಕೆಲ ದಾಖಲೆ ಪತ್ರಗಳು ಬೆಂಕಿಗಾಹುತಿಯಾಗಿವೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಮಂಗಳೂರಿನ ಪಾಂಡೇಶ್ವರ ಅಗ್ನಿಶಾಮಕ ದಳ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು.