ಕರ್ನಾಟಕ

karnataka

ETV Bharat / city

ಎನ್​ಆರ್​ಸಿ ಹಿಂಪಡೆದರೆ ಅಮಿತ್​​ ಶಾ ದೇಶದ ಜನರ ಮುಂದೆ ಕ್ಷಮೆ ಕೇಳಲಿ: ಐವನ್ ಡಿಸೋಜ

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ವಿಧಾನ ಪರಿಷತ್​ ಸದಸ್ಯ ಐವನ್ ಡಿಸೋಜ, ಪ್ರಧಾನಿ ಮೋದಿಯವರು ಎನ್ಆರ್‌ಸಿ ಕಾಯ್ದೆ ಜಾರಿಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಪ್ರಧಾನಿ ಹೇಳಿಕೆ ನಿಜವಾದಲ್ಲಿ ಅಮಿತ್ ಶಾ ದೇಶದ ಜನರ ಮುಂದೆ ಕ್ಷಮೆ ಯಾಚಿಸಲಿ ಎಂದು ಆಗ್ರಹಿಸಿದ್ದಾರೆ.

ivan-dsouza
ವಿಧಾನ ಪರಿಷತ್​ ಸದಸ್ಯ ಐವನ್ ಡಿಸೋಜ

By

Published : Jan 16, 2020, 8:22 PM IST

ಮಂಗಳೂರು : ಪ್ರಧಾನಿ ಮೋದಿಯವರು ಎನ್ಆರ್‌ಸಿ ಕಾಯ್ದೆ ಜಾರಿಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಗೃಹ ಮಂತ್ರಿ ಅಮಿತ್ ಶಾ ಅವರು ಎನ್ಆರ್‌ಸಿ ಜಾರಿಗೊಳಿಸುವ ಬಗ್ಗೆ ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ‌. ಒಂದು ವೇಳೆ ಪ್ರಧಾನಿ ಹೇಳಿಕೆ ನಿಜವಾದಲ್ಲಿ ಅಮಿತ್ ಶಾ ದೇಶದ ಜನರ ಮುಂದೆ ಕ್ಷಮೆ ಯಾಚಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ.

ನಗರದ ಮ.ನ.ಪಾದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ವೇಳೆ ಅಮಿತ್ ಶಾ ತಮ್ಮ ಹೇಳಿಕೆ ಹಿಂದಕ್ಕೆ ತೆಗೆದುಕೊಳ್ಳುವುದಾದರೆ ಇಂತಹ ಗೊಂದಲ ಯಾಕೆ ಸೃಷ್ಟಿಸಲಾಗಿದೆ ಎಂದು ಸ್ಪಷ್ಟನೆ ನೀಡಲಿ ಎಂದು ಕಿಡಿಕಾರಿದರು.

ಅಮಿತ್ ಶಾ ವಿರುದ್ಧ ಗುಡುಗಿದ ವಿಧಾನ ಪರಿಷತ್​ ಸದಸ್ಯ ಐವನ್ ಡಿಸೋಜ

ಚುನಾವಣೆ ಸಂದರ್ಭದಲ್ಲಿ ಮಹದಾಯಿ ವಿಚಾರ ಬಗೆಹರಿಸುವುದಾಗಿ ಹೇಳಿ ಚುನಾವಣೆ ಗಿಮಿಕ್ ಮಾಡಿದ್ದರು. ಆದರೆ ಚುನಾವಣೆ ಮುಗಿದು ಇಷ್ಟು ದಿನವಾದ್ರೂ ಯಾವುದೇ ಚಕಾರವೆತ್ತಿಲ್ಲ. ಈ ಬಗ್ಗೆ ರಾಜ್ಯದ ಜನರಿಗೆ ಎನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಲಿ ಎಂದು ಒತ್ತಾಯಿಸಿದರು.

ಮೂರು ಲಕ್ಷ ಕೋಟಿ ರೂ. ಕೇಂದ್ರದಿಂದ ರಾಜ್ಯಕ್ಕೆ ಅನುದಾನ ನೀಡಲಾಗಿದೆ, ಸಿದ್ದರಾಮಯ್ಯ ಸರ್ಕಾರ ಅದನ್ನು ಜನರಿಗೆ ತಲುಪಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈಗ ನಿಮ್ಮದೇ ಸರಕಾರವಿದೆ. ಈ ಬಾರಿ ಎಷ್ಟು ಅನುದಾನ ನೀಡಿದ್ದೀರಿ ಎಂಬುದರ ಬಗ್ಗೆ ಶ್ವೇತ ಪತ್ರ ಹೊರಡಿಸಿ. ಈ ಬಗ್ಗೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ನಡೆಯಲಿ ಎಂದು ಸವಾಲೆಸೆದರು.

ರಾಜ್ಯದಲ್ಲಿ ಭೀಕರ ಪ್ರವಾಹ ಬಂದು 35 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ರಾಜ್ಯಸರ್ಕಾರ ವರದಿ ಮಾಡಿತ್ತು. ಆದರೆ ಈವರೆಗೆ ಕೇವಲ 1,800 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದ್ದಾರೆ. ಬೇರೆ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿದ್ದೀರಿ, ಈ ರೀತಿಯ ಮಲತಾಯಿ ಧೋರಣೆ ನೀತಿ ಏಕೆ? ಎಂದರು.

ಜ. 18,19 ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದು ಇದೆಲ್ಲದ್ದಕ್ಕೂ ಉತ್ತರ ನೀಡಲಿ ಎಂದು ಐವನ್ ಡಿಸೋಜ ಹೇಳಿದರು.

For All Latest Updates

TAGGED:

ABOUT THE AUTHOR

...view details