ಬೆಳ್ತಂಗಡಿ (ದ.ಕ): ತಾಲೂಕಿನ ಗೇರುಕಟ್ಟೆಯ ಕಳಿ ಗ್ರಾಮ ಪಂಚಾಯತ್ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿ ದಾಖಲೆ ವಶಪಡಿಸಿಕೊಂಡಿದ್ದಾರೆ. ಈ ಗ್ರಾಮ ಪಂಚಾಯತ್ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್ ಬಿ.ಸಿ. ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಭ್ರಷ್ಟಾಚಾರ ಆರೋಪ: ಬೆಳ್ತಂಗಡಿಯ ಕಳಿ ಗ್ರಾಪಂ ಮೇಲೆ ಎಸಿಬಿ ದಾಳಿ - ACB attacks on village panchayat
ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಒ ಸೇರಿ ಒಂದು ಕುಟುಂಬಕ್ಕೆ ಹಲವು ಹಕ್ಕುಪತ್ರ ವಿತರಣೆ ಸೇರಿ ವಿವಿಧ ಅಕ್ರಮ ನಡೆಸಿರುವ ಕುರಿತು ದೂರುಗಳು ಕೇಳಿ ಬಂದಿದ್ದವು. ಇದೀಗ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ತನಿಖೆ ಮುಂದುವರೆದಿದೆ.
![ಭ್ರಷ್ಟಾಚಾರ ಆರೋಪ: ಬೆಳ್ತಂಗಡಿಯ ಕಳಿ ಗ್ರಾಪಂ ಮೇಲೆ ಎಸಿಬಿ ದಾಳಿ Allegations of corruption: ACB attack on Kaliya Gram Panchayat](https://etvbharatimages.akamaized.net/etvbharat/prod-images/768-512-7893041-394-7893041-1593880465396.jpg)
ಭ್ರಷ್ಟಾಚಾರ ಆರೋಪ: ಬೆಳ್ತಂಗಡಿಯ ಕಳಿಯ ಗ್ರಾಮ ಪಂಚಾಯಿತಿ ಮೇಲೆ ಎಸಿಬಿ ದಾಳಿ
ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಒ ಸೇರಿ ಒಂದು ಕುಟುಂಬಕ್ಕೆ 2-3, 94C ಹಕ್ಕುಪತ್ರ ವಿತರಿಸಿದ್ದು ಮತ್ತು ಜಾಗದಲ್ಲಿ ಯಾವುದೇ ರೀತಿಯ ಮನೆ ಇಲ್ಲದಿದ್ದರೂ ಅವರಿಗೆ 94C ಹಕ್ಕುಪತ್ರ ವಿತರಿಸಿರುವ ಗುರುತರ ಆರೋಪದ ಕುರಿತು ಸಾರ್ವಜನಿಕರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಎಸಿಬಿ ಪೊಲೀಸರು ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.