ಕರ್ನಾಟಕ

karnataka

ETV Bharat / city

ಮಂಗಳೂರು: Air India ನಿವೃತ್ತ ಮ್ಯಾನೇಜರ್‌ 14ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ - ಮಂಗಳೂರು ಸುದ್ದಿ

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಏರ್ ಇಂಡಿಯಾದ ನಿವೃತ್ತ ಮ್ಯಾನೇಜರ್‌ ಆಗಿದ್ದ ವೃದ್ಧೆಯೊರ್ವರು ಕಟ್ಟಡದ 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Air india retired manager suicide by jumping the building in mangalore
ಏರ್ ಇಂಡಿಯಾದ ನಿವೃತ್ತ ಮ್ಯಾನೇಜರ್‌ ಬಹುಮಹಡಿಯಿಂದ ಜಿಗಿದು ಆತ್ಮಹತ್ಯೆ

By

Published : Jun 10, 2021, 2:14 PM IST

ಮಂಗಳೂರು: ಮುಂಬಯಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿದ್ದ ವೃದ್ಧೆಯೊಬ್ಬರು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಪುಷ್ಪಲತಾ ನಾಯಕ್ (64) ಎಂದು ಗುರುತಿಸಲಾಗಿದೆ. ಇವರು ಕುಲಶೇಖರದ ಪ್ಲಾಮಾ ಗ್ರಾಂಡ್ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿದ್ದರು.

ಪತಿ ತರಕಾರಿ ತರಲು ಮಾರುಕಟ್ಟೆಗೆ ಹೋದ ಸಂದರ್ಭದಲ್ಲಿ ಅಪಾರ್ಟ್ಮೆಂಟ್ ಬಾಲ್ಕನಿಯ 14ನೇ ಮಹಡಿಯಿಂದ ವೃದ್ಧೆ ಕೆಳಕ್ಕೆ ಹಾರಿದ್ದಾರೆ. ಕಳೆದ 10 ವರ್ಷದಿಂದ ಇದೇ ಅಪಾರ್ಟ್ಮೆಂಟ್‌ನಲ್ಲಿ ಇವರು ವಾಸ ಮಾಡಿಕೊಂಡಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪುಷ್ಪಲತಾ ನಾಯಕ್‌ ಹಿಂದೊಮ್ಮೆ ಕೂಡಾ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details