ಕರ್ನಾಟಕ

karnataka

ETV Bharat / city

ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಕಾರು ಡಿಕ್ಕಿ: ನೇಪಾಳ ಮೂಲದ ವ್ಯಕ್ತಿ ಸಾವು - ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ

ನೇಪಾಳ ನಿವಾಸಿ ಕಮಲ್ (50) ಎಂಬುವರು ಮೃತಪಟ್ಟವರು. ಘಟನೆ‌ ಫೆ. 7ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಐವನ್ ಡಿಸೋಜ ಮಾಲೀಕತ್ವದ KA 53MC0001 ಕಾರು ಚಾಲಕ ಪ್ರದೀಪ್ ನಿರ್ಲಕ್ಷ್ಯದಿಂದ ಚಲಾಯಿಸಿ ಮಂಗಳೂರಿನ ಅಡ್ಯಾರ್ ಸಮೀಪ ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

aicc-secretary-ivan-dsouza-car-accident-news
ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಕಾರು ಡಿಕ್ಕಿ

By

Published : Feb 12, 2021, 10:58 PM IST

ಮಂಗಳೂರು: ಎಐಸಿಸಿ ಕಾರ್ಯದರ್ಶಿ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಮಾಲೀಕತ್ವದ ಕಾರು ಡಿಕ್ಕಿಯಾಗಿ ನೇಪಾಳ ಮೂಲದ ವ್ಯಕ್ತಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಓದಿ: ಮೀಸಲಾತಿ ಘೋಷಣೆ ಮಾಡದಿದ್ದರೆ ವಿಧಾನಸೌಧ ಮುತ್ತಿಗೆ: ವಿಜಯಾನಂದ ಕಾಶಪ್ಪನವರ

ನೇಪಾಳ ನಿವಾಸಿ ಕಮಲ್ (50) ಎಂಬುವರು ಮೃತಪಟ್ಟವರು. ಘಟನೆ‌ ಫೆ. 7ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಐವನ್ ಡಿಸೋಜ ಮಾಲೀಕತ್ವದ ಕಾರಿನ ಚಾಲಕ ಪ್ರದೀಪ್ ನಿರ್ಲಕ್ಷ್ಯದಿಂದ ಚಲಾಯಿಸಿ ಮಂಗಳೂರಿನ ಅಡ್ಯಾರ್ ಸಮೀಪ ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ.

ಈ ಸಂದರ್ಭದಲ್ಲಿ ಐವನ್ ಡಿಸೋಜ ಕೇರಳ ಪ್ರವಾಸದಲ್ಲಿದ್ದು, ಕಾರಿನಲ್ಲಿ ಇರಲಿಲ್ಲ. ಅಪಘಾತದಿಂದ ತಲೆಗೆ ತೀವ್ರ ಗಾಯಗಳಾಗಿದ್ದ ಕಮಲ್​​ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಫೆ. 10ರಂದು ಮೃತಪಟ್ಟಿದ್ದಾರೆ.

ಮೃತದೇಹವನ್ನು ವೆನ್ಲಾಕ್ ಶವಗಾರದಲ್ಲಿರಿಸಲಾಗಿದ್ದು, ಕಮಲ್ ಕುಟುಂಬ ನೇಪಾಳದಿಂದ ಬಂದು ಕೊಂಡೊಯ್ಯಲಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details