ಕರ್ನಾಟಕ

karnataka

ETV Bharat / city

ನಕ್ಸಲರಿಗೆ ನೆರವು ಆರೋಪ: ವಿಚಾರಣೆಗೆ ಮತ್ತೆ ಗೈರಾದ ಪೊಲೀಸ್ ಅಧಿಕಾರಿಗಳು - ಮಂಗಳೂರು ವಿವಿ ವಿದ್ಯಾರ್ಥಿ ವಿಠಲ ಮಲೆಕುಡಿ

ಮಂಗಳೂರು ವಿವಿ ವಿದ್ಯಾರ್ಥಿಯಾಗಿದ್ದ ವಿಠಲ ಮಲೆಕುಡಿಯ ನಕ್ಸಲರಿಗೆ ನೆರವಾಗಿದ್ದಾರೆ ಎಂದು ಆರೋಪ ಹೊರಿಸಿ 2012ರ ಮಾರ್ಚ್ 3ರಂದು ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆಗೆ ಮಂಗಳವಾರ ಹಾಜರಾಗಬೇಕಿದ್ದ ಅಂದಿನ ಪುತ್ತೂರು ಎಎಸ್​ಪಿ ಮತ್ತು ಬೆಳ್ತಂಗಡಿ ಸರ್ಕಲ್ ಇನ್ಸ್​ಪೆಕ್ಟರ್ ಸಹಿತ ಮೂವರು ಮತ್ತೆ ಗೈರು ಹಾಜರಾಗಿದ್ದಾರೆ.

Mangalore
ಮತ್ತೆ ವಿಚಾರಣೆಗೆ ಗೈರಾದ ಪೊಲೀಸ್ ಅಧಿಕಾರಿಗಳು

By

Published : Jul 7, 2021, 10:57 AM IST

ಮಂಗಳೂರು:ನಕ್ಸಲರಿಗೆ ನೆರವಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರು ವಿವಿ ವಿದ್ಯಾರ್ಥಿ ವಿಠಲ ಮಲೆಕುಡಿಯ ಅವರ ಮೇಲಿರುವ ಪ್ರಕರಣದ ವಿಚಾರಣೆಗೆ ಮಂಗಳವಾರ ಹಾಜರಾಗಬೇಕಿದ್ದ ಅಂದಿನ ಪುತ್ತೂರು ಎಎಸ್​ಪಿ ಎಂ.ಎನ್. ಅನುಚೇತನ್ ಮತ್ತು ಬೆಳ್ತಂಗಡಿ ಸರ್ಕಲ್ ಇನ್ಸ್​ಪೆಕ್ಟರ್ ಭಾಸ್ಕರ ರೈ ಸಹಿತ ಮೂವರು ಮತ್ತೆ ಗೈರು ಹಾಜರಾಗಿದ್ದಾರೆ. ಹಾಗಾಗಿ, ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಜು.27ಕ್ಕೆ ಮುಂದೂಡಿದ್ದಾರೆ.

ಬೆಳ್ತಂಗಡಿ ಎಸ್​​​ಐ ಆಗಿದ್ದ ಉಮೇಶ್ ಉಪ್ಪಳಿಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ 2021ರ ಮಾ.1ರಂದು ವಿಚಾರಣೆ ಎದುರಿಸಿದ್ದರು. ಆದರೆ, ಎಂ.ಎನ್.ಅನುಚೇತನ್ ಮತ್ತು ಭಾಸ್ಕರ ರೈ ಗೈರು ಹಾಜರಾಗಿದ್ದ ಕಾರಣ ಮಾ. 23ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಆವತ್ತೂ ಈ ಅಧಿಕಾರಿಗಳು ಗೈರಾಗಿದ್ದರು. ಬಳಿಕ ಏ.12ರಂದು ಹಾಜರಾಗಲು ನ್ಯಾಯಾಲಯ ಸೂಚಿಸಿತ್ತು. ಆಗಲೂ ಅಧಿಕಾರಿಗಳು ಹಾಜರಾಗಿರಲಿಲ್ಲ.

ಬಳಿಕ ಮೇ 5ಕ್ಕೆ ಹಾಜರಾಗಲು ಸೂಚಿಸಲಾಗಿತ್ತು. ಆದರೆ, ಲಾಕ್‌ಡೌನ್ ಜಾರಿಯಲ್ಲಿದ್ದ ಕಾರಣ ನ್ಯಾಯಾಲಯದ ಕಲಾಪ ನಡೆದಿರಲಿಲ್ಲ. ಅದರಂತೆ ಜುಲೈ 6ಕ್ಕೆ ವಿಚಾರಣೆಗೆ ಹಾಜರಾಗಲು ತಿಳಿಸಲಾಗಿತ್ತು. ಆದರೆ, ಮಂಗಳವಾರವೂ ಯಾರೂ ಹಾಜರಾಗದ ಕಾರಣ ವಿಚಾರಣೆಯನ್ನು ಮತ್ತೆ ಮುಂದೂಡಲಾಗಿದೆ.

ಮಂಗಳೂರು ವಿವಿ ವಿದ್ಯಾರ್ಥಿಯಾಗಿದ್ದ ವಿಠಲ ಮಲೆಕುಡಿಯ ನಕ್ಸಲರಿಗೆ ನೆರವಾಗಿದ್ದಾರೆ ಎಂದು ಆರೋಪ ಹೊರಿಸಿ 2012ರ ಮಾರ್ಚ್ 3ರಂದು ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 45 ಸಾಕ್ಷಿಗಳ ವಿಚಾರಣೆ ನಡೆದಿದೆ ಎಂದು ನ್ಯಾಯವಾದಿ ದಿನೇಶ್ ಉಳೇಪ್ಪಾಡಿ ತಿಳಿಸಿದ್ದಾರೆ.

ಇದನ್ನೂ ಓದಿ:ಸದನದಲ್ಲಿ ಮೀನುಗಾರರ ಸಮಸ್ಯೆಗೆ ಧ್ವನಿಯಾಗುವೆ: ಕಡಲ ಮಕ್ಕಳಿಗೆ ಡಿಕೆಶಿ ಅಭಯ

ABOUT THE AUTHOR

...view details