ಮಂಗಳೂರು: ಪೊಲೀಸರ ಟ್ರಾಫಿಕ್ ಕಾರ್ಯಾಚರಣೆ ವೇಳೆ ಹೆಲ್ಮೆಟ್ ಇಲ್ಲದೆ ವೇಗವಾಗಿ ಹೋಗುತ್ತಿದ್ದ ಬೈಕ್ ಸವಾರನನ್ನು ತಡೆಯಲು ಯತ್ನಿಸಿದಾಗ ಆಟೋ ರಿಕ್ಷಾಕ್ಕೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಟ್ರಾಫಿಕ್ ಪೊಲೀಸರ ತಪಾಸಣೆ ವೇಳೆ ಅವಘಡ: ಬೈಕ್ ಸವಾರ ಗಂಭೀರ - undefined
ಪೊಲೀಸರ ಟ್ರಾಫಿಕ್ ಕಾರ್ಯಾಚರಣೆ ವೇಳೆ ಹೆಲ್ಮೆಟ್ ಇಲ್ಲದೆ ವೇಗವಾಗಿ ಹೋಗುತ್ತಿದ್ದ ಬೈಕ್ ಸವಾರನನ್ನು ತಡೆಯಲು ಯತ್ನಿಸಿದ ಪೊಲೀಸರು. ಮುಂಭಾಗದಲ್ಲಿದ್ದ ಆಟೋ ರಿಕ್ಷಾಕ್ಕೆ ಬೈಕ್ ಡಿಕ್ಕಿ. ಬೈಕ್ ಸವಾರನಿಗೆ ಗಂಭೀರ ಗಾಯ.
![ಟ್ರಾಫಿಕ್ ಪೊಲೀಸರ ತಪಾಸಣೆ ವೇಳೆ ಅವಘಡ: ಬೈಕ್ ಸವಾರ ಗಂಭೀರ](https://etvbharatimages.akamaized.net/etvbharat/prod-images/768-512-3254152-thumbnail-3x2-megha.jpg)
ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ನ ಚತುಷ್ಪಥ ಮೇಲ್ಸೆತುವೆ ಕೊನೆಗೊಳ್ಳುವ ಸ್ಥಳದಲ್ಲಿ ಘಟನೆ ನಡೆದಿದೆ. ಬಂಟ್ವಾಳ ಸಂಚಾರಿ ಎಸ್ಐ ನೇತೃತ್ವದಲ್ಲಿ ಇಂದು ಬಿ.ಸಿ.ರೋಡ್ನ ಚತುಷ್ಪಥ ರಸ್ತೆಯಲ್ಲಿ ಪೊಲೀಸರು ತಪಾಸಣೆ ಮಾಡುತ್ತಿರುವ ವೇಳೆ ಹೆಲ್ಮೆಟ್ ಧರಿಸದೆ ಹೋಗುತ್ತಿದ್ದ ಬೈಕ್ ಸವಾರನನ್ನು ಪೊಲೀಸರು ನಿಲ್ಲಿಸಲು ಯತ್ನಿಸಿದ್ದಾರೆ. ಈ ವೇಳೆ ಮುಂಭಾಗದಲ್ಲಿದ್ದ ಆಟೋ ರಿಕ್ಷಾಕ್ಕೆ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬೈಕ್ ಸವಾರ ಮೇಲ್ಸೆತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಉರುಳಿ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರವಾದ ಗಾಯವಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಹಾಗೂ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ತಪಾಸಣೆಯ ಹೆಸರಿನಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ ಎಂದು ಪೊಲೀಸರ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.