ಮಂಗಳೂರು :ಅಮಲು ಪದಾರ್ಥ ಸೇವಿಸಿ ಬಂದಿದ್ದಕ್ಕೆ ತಂದೆ ಬೈದು ಬುದ್ಧಿವಾದ ಹೇಳಿದ್ದೇ ನೆಪವಾಗಿಸಿಕೊಂಡು ಮಗನೊಬ್ಬ ಮನೆ ಬಿಟ್ಟುಹೋದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಅಮಲು ಪದಾರ್ಥ ಸೇವಿಸಿದಕ್ಕೆ ಬೈದ ತಂದೆ.. ಮನೆ ಬಿಟ್ಟುಹೋದ ಮಗ! - ಮಂಗಳೂರು ಲೇಟೆಸ್ಟ್ ನ್ಯೂಸ್
ಮಂಗಳೂರಿನಿಂದ ನಾಪತ್ತೆಯಾದ ಮಗ ಸ್ವಂತ ಊರಿಗೂ ಹೋಗದೆ ಇರುವುದರಿಂದ ಆತಂಕಗೊಂಡ ತಂದೆ, ಕದ್ರಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ..
ಅಮಲು ಪದಾರ್ಥ ಸೇವಿಸಿದಕ್ಕೆ ಬೈದ ತಂದೆ..ಮನೆ ಬಿಟ್ಟುಹೋದ ಮಗ
ಪೈಂಟಿಂಗ್ ಕೆಲಸಕ್ಕೆಂದು ಬಂದು ಮಂಗಳೂರಿನ ಕುಂಟಿಕಾನದಲ್ಲಿ ವಾಸವಾಗಿದ್ದ ಮಹಾರಾಷ್ಟ್ರದ ಸತಾರ ಜಿಲ್ಲೆಯ ವಾರುಗಡ್ನ ಪ್ರಶಾಂತ್ ಗೋಶಾಲಿ (28) ನಾಪತ್ತೆಯಾದ ಯುವಕ. ಈತ ಜನವರಿ 7ರ ರಾತ್ರಿ ಅಮಲು ಪದಾರ್ಥ ಸೇವಿಸಿ ಮನೆಗೆ ಬಂದಿದ್ದ. ಮರುದಿನ ಬೆಳಗ್ಗೆ ಅಮಲು ಪದಾರ್ಥ ಸೇವಿಸಿದ್ದಕ್ಕೆ ಈತನ ತಂದೆ ಬೈದು ಬುದ್ಧಿವಾದ ಹೇಳಿದ್ದರು.
ತಂದೆ ಬೈದ ಹಿನ್ನೆಲೆ ಪ್ರಶಾಂತ್ ಗೋಶಾಲಿ ಮನೆಬಿಟ್ಟು ಹೋಗಿದ್ದಾನೆ. ಮಂಗಳೂರಿನಿಂದ ನಾಪತ್ತೆಯಾದ ಮಗ ಸ್ವಂತ ಊರಿಗೂ ಹೋಗದೆ ಇರುವುದರಿಂದ ಆತಂಕಗೊಂಡ ತಂದೆ, ಕದ್ರಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.