ಕರ್ನಾಟಕ

karnataka

ETV Bharat / city

ಮಂಗಳೂರು: ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ - ಮಂಗಳೂರು ಲೇಟೆಸ್ಟ್​ ನ್ಯೂಸ್​

ಮಂಗಳೂರು ತಾಲೂಕಿನ ಅರ್ಕುಳ ಗ್ರಾಮದ ಮಹಿಳೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದು, ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A woman missing with two children
ಮಂಗಳೂರು: ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ

By

Published : Oct 28, 2020, 1:41 PM IST

ಮಂಗಳೂರು:ತಾಲೂಕಿನ ಅರ್ಕುಳ ಗ್ರಾಮದ ಮಹಿಳೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ.

ರೇಖಾ ಪಿರೇರಾ (39), ಡೇಲಿಸಾ ಅನ್ನಾ ಪಿರೇರಾ (15), ಡೆಲ್ಸನ್ ರಾಲ್ಪ್ ಪಿರೇರಾ(10 ) ನಾಪತ್ತೆಯಾದವರು‌. ಮೂವರು ಅರ್ಕುಳ ಗ್ರಾಮದ ವಳಚ್ಚಿಲ್ ನವಜ್ಯೋತಿ ನಗರದಿಂದ ನಾಪತ್ತೆಯಾಗಿದ್ದಾರೆ. ಅಕ್ಟೋಬರ್ 21ರಂದು ಮನೆಯಿಂದ ಹೊರಗೆ ಹೋದವರು ಕಾಣೆಯಾಗಿದ್ದಾರೆ.

ನಾಪತ್ತೆಯಾದ ರೇಖಾ ಪಿರೇರಾ 4.6 ಅಡಿ ಎತ್ತರವಿದ್ದು, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದಾರೆ. ಇವರು ಕೊಂಕಣಿ, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಈ ಕುರಿತು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details