ಕರ್ನಾಟಕ

karnataka

ETV Bharat / city

ಸಾಮಾಜಿಕ ಕಾರ್ಯಕರ್ತನ ವಿನೂತನ ಮದುವೆ ವಾರ್ಷಿಕೋತ್ಸವ - ಪಂಜ ಸಮೀಪದ ಚಿಂಗಾಣಿಗುಡ್ಡೆ

ತಮ್ಮ ಮನೆಯ ಸುತ್ತ ಇರುವ ಕಾಂಪೌಂಡ್ ಗೋಡೆಯ ಮೇಲೆ ಜನಜಾಗೃತಿ ಚಿತ್ರಗಳನ್ನು ಬಿಡಿಸುವ ಮುಖೇನ ಸುಳ್ಯ ತಾಲೂಕಿನ ಪಂಜ ಸಮೀಪದ ಚಿಂಗಾಣಿಗುಡ್ಡೆ ಸಮೀಪದ ನಿವಾಸಿ ಜಿನ್ನಪ್ಪ ಅಳ್ಪೆ ಅವರು ಮದುವೆ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ.

wedding anniversary
ಕಾಂಪೌಂಡ್ ಗೋಡೆಯ ಮೇಲೆ ಜನಜಾಗೃತಿ ಚಿತ್ರಗಳನ್ನು ಬಿಡಿಸುತ್ತಿರುವ ಸಾಮಾಜಿಕ ಕಾರ್ಯಕರ್ತ

By

Published : Jul 4, 2021, 3:44 PM IST

ಸುಳ್ಯ: ಇಲ್ಲೊಬ್ಬ ಸಾಮಾಜಿಕ ಕಾರ್ಯಕರ್ತ ತನ್ನ ವಿವಾಹದ ಬೆಳ್ಳಿಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾನೆ. ಸುಳ್ಯ ತಾಲೂಕಿನ ಪಂಜ ಸಮೀಪದ ಚಿಂಗಾಣಿಗುಡ್ಡೆ ಸಮೀಪದ ನಿವಾಸಿ ಜಿನ್ನಪ್ಪ ಅಳ್ಪೆ ಅವರು ಮದುವೆ ವಾರ್ಷಿಕೋತ್ಸವವನ್ನು ವಿಭಿನ್ನವಾಗಿ ಆಚರಿಸುತ್ತಿವವರು.

ಕಾಂಪೌಂಡ್ ಗೋಡೆಯ ಮೇಲೆ ಜನಜಾಗೃತಿ ಚಿತ್ರಗಳನ್ನು ಬಿಡಿಸುತ್ತಿರುವ ಸಾಮಾಜಿಕ ಕಾರ್ಯಕರ್ತ

ತಮ್ಮ ಮನೆಯ ಸುತ್ತಲೂ ಇರುವ ಕಾಂಪೌಂಡ್ ಗೋಡೆಯ ಮೇಲೆ ಇವರು ಜನಜಾಗೃತಿ ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಈಗಾಗಲೇ ಸಿನಿಮಾ ಸೆಟ್‌ಗಳಲ್ಲಿ ಚಿತ್ರಕಲೆಯ ಮೂಲಕ ಪರಿಚಿತರಾಗಿರುವ ಬಳ್ಳಕ್ಕದ ಕಲಾ ಆರ್ಟಿಸ್ಟ್ ಸುರೇಶ್ ಅವರು ಮನೋಹರವಾದ ಚಿತ್ರಗಳನ್ನು ಬಿಡಿಸುತ್ತಿದ್ದಾರೆ.

ಆಕ್ಸಿಜನ್ ಸಿಲಿಂಡರ್ ಅನ್ನು ಬೆನ್ನು ಮೇಲೆ ಹಾಕಿಕೊಂಡು ಗಿಡ ನೆಡುವ ಹುಡುಗ, ಕೊರೊನಾ ಲಸಿಕೆ ಜಾಗೃತಿ ಚಿತ್ರ, ಹಳೆಯ ಕಾಲದಲ್ಲಿದ್ದ ಸಾಕ್ಷರತಾ ಆಂದೋಲನ, ಭೂಮಿಗೆ ಟ್ಯಾಪ್ ಹಾಕಿರುವ ನೀರಿನ ಸಂರಕ್ಷಣಾ ಜಾಗೃತಿ ಚಿತ್ರ, ಕಸ ವಿಲೇವಾರಿ ಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

ಇನ್ನು ಚಿಂಗಾಣಿಗುಡ್ಡೆಯ ಕಾಂಕ್ರೀಟ್ ರಸ್ತೆಯ ಉದ್ಘಾಟನೆಗೆ ಆಗಮಿಸುವ ಸಚಿವ ಎಸ್.ಅಂಗಾರ ಅವರಿಗೆ ಬಿಡುವು ಇದ್ದರೆ ಅವರ ಕೈಯಿಂದ ತಮ್ಮ ಈ ಜನಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿಸಬೇಕೆಂಬುದು ಸಾಮಾಜಿಕ ಕಾರ್ಯಕರ್ತ ಜಿನ್ನಪ್ಪ ಆಳ್ಬೆ ಅವರ ಆಶಯ.

ಕಳೆದ ಪಂಚಾಯತ್ ಮತದಾನದ ಸಮಯದಲ್ಲಿ ಇವರನ್ನು ಕೆಲವು ಜನರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿಸಿದ್ದರು. ಆದರೆ ಚುನಾವಣೆಯಲ್ಲಿ ವಿಜಯ ಸಾಧಿಸಲು ಸಾಧ್ಯವಾಗಿಲ್ಲ. ಆ ವೇಳೆ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದ ಹಾಗೆ ಸೋತರೂ ಜನಸೇವೆ ಮಾಡುತ್ತೇನೆ ಎಂಬ ಭರವಸೆಯಂತೆ ಜಿನ್ನಪ್ಪ ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

ABOUT THE AUTHOR

...view details