ETV Bharat Karnataka

ಕರ್ನಾಟಕ

karnataka

ETV Bharat / city

ಎಸ್​ಡಿಪಿಐ ಉಳ್ಳಾಲ ಕ್ಷೇತ್ರ ಸಮಿತಿ ಅಧ್ಯಕ್ಷನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು - ಎಸ್​ಡಿಪಿಐ ಉಳ್ಳಾಲ ಕ್ಷೇತ್ರ ಸಮಿತಿ ಅಧ್ಯಕ್ಷನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಎಸ್​ಡಿಪಿಐ ಉಳ್ಳಾಲ ಕ್ಷೇತ್ರ ಸಮಿತಿ ಅಧ್ಯಕ್ಷ ಸಿದ್ಧಿಕ್​ ಎಂಬಾತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.

POCSO case
ಪೋಕ್ಸೊ ಪ್ರಕರಣ ದಾಖಲು
author img

By

Published : Jan 19, 2021, 7:32 AM IST

ಉಳ್ಳಾಲ:ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಎಸ್​ಡಿಪಿಐ ಉಳ್ಳಾಲ ಕ್ಷೇತ್ರ ಸಮಿತಿ ಅಧ್ಯಕ್ಷನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.

ಉಳ್ಳಾಲ ನಿವಾಸಿ ಸಿದ್ಧಿಕ್​ ಎಂಬಾತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಈತ ಬಾಲಕಿಯ ತಾಯಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡಿದ್ದು, ಬಳಿಕ ಆಕೆಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ.

ಇನ್ನು ನೊಂದ ಬಾಲಕಿಯು ತನ್ನ ತಾಯಿಗೆ ವಿಚಾರ ತಿಳಿಸಿದ್ದಾಳೆ. ಆದರೆ, ತಾಯಿ ದೂರು ನೀಡದಂತೆ ಎಸ್​ಡಿಪಿಐ ಮುಖಂಡರಾದ
ನವಾಝ್ ಉಳ್ಳಾಲ್, ನಿಝಾಮುದ್ದೀನ್, ಇಫ್ತಿಕಾರ್, ಮುಸ್ತಾಫ ಎಂಬವರು ಬೆದರಿಕೆಯೊಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ವಿರುದ್ಧವೂ ದೂರು ದಾಖಲಾಗಿದೆ.

ABOUT THE AUTHOR

author-img

...view details