ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆಗೆ ಇರುವ ಡಾಗ್ ಸ್ಕ್ವಾಡ್ಗೆ ಹೊಸ ಶ್ವಾನವೊಂದು ಸೇರ್ಪಡೆಯಾಗಿದೆ.
ಸಿಐಎಸ್ಎಫ್ ಏವಿಯೇಶನ್ ಸೆಕ್ಯುರಿಟಿ ಗ್ರೂಪ್ನ ಅಧೀನದಲ್ಲಿರುವ ಡಾಗ್ ಸ್ಕ್ವಾಡ್ಗೆ ಗೋಲ್ಡಿ ಎಂಬ ಹೆಸರಿನ ಶ್ವಾನವನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಗೋಲ್ಡಿ ಶ್ವಾನ ಗೋಲ್ಡನ್ ರಿಟ್ರೀವರ್ ಜಾತಿಗೆ ಸೇರಿದ ಶ್ವಾನವಾಗಿದೆ. ಒಂದು ವರ್ಷ ಪ್ರಾಯದ ಗಂಡು ಶ್ವಾನವನ್ನು ರಾಂಚಿಯ ಶ್ವಾನ ತರಬೇತಿ ಶಾಲೆಯಲ್ಲಿ ಆರು ತಿಂಗಳ ಕಾಲ ತರಬೇತಿ ನೀಡಿ ಮಂಗಳೂರು ವಿಮಾನ ನಿಲ್ದಾಣದ ಭದ್ರತೆಗೆ ನಿಯೋಜಿಸಲಾಗಿದೆ.