ಮಂಗಳೂರು:ನಗರದ ಕಾವೂರಿನ ವ್ಯಾಪಾರಿಯೊಬ್ಬ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಪಂಜಿಮೊಗರು ನಿವಾಸಿ ಮುಸ್ತಾಫ್(35) ಆರೋಪಿ. ಈತ ಕಾವೂರಿನಲ್ಲಿ ತರಕಾರಿ ಅಂಗಡಿಯನ್ನು ನಡೆಸುತ್ತಿದ್ದಾನೆ.
ಅಪ್ರಾಪ್ತೆಯು ತನ್ನ ತಾಯಿಯೊಂದಿಗೆ ಕಾವೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಆರೋಪಿ ಮುಸ್ತಾಫ್ ತರಕಾರಿ ಅಂಗಡಿಗೆ ಬರುವ ಬಾಲಕಿಗೆ ತನಗೆ ಫೋನ್ ಮಾಡುವಂತೆ ದಿನವೂ ಕಿರುಕುಳ ನೀಡುತ್ತಿದ್ದನಂತೆ. ಅಲ್ಲದೇ, ತಾನೇ ಫೋನ್ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದನಂತೆ. ಇದನ್ನು ಬಾಲಕಿ ನಿರ್ಲಕ್ಷಿಸಿದ್ದಳು.