ಮಂಗಳೂರು:ಖಾಸಗಿ ಬಸ್ವೊಂದರಲ್ಲಿ ಬಿಹಾರದ ಯುವಕನ ಜೊತೆಗೆ ಮಹಿಳೆಯೊಬ್ಬಳು ಪ್ರಯಾಣಿಸುತ್ತಿದ್ದಳು. ಇವರನ್ನು ನೋಡಿದ ಕೆಲವರಿಗೆ ತಲೆಯಲ್ಲಿ ಮತೀಯ ವಿಚಾರ ಬಂದಿದೆ. ಇವರಿಬ್ಬರನ್ನು ಅನ್ಯಮತೀಯ ಜೋಡಿ ಎಂದು ಬಸ್ ತಡೆದವರಿಗೇ ಕೊನೆಗೆ ತಾವು ತಪ್ಪು ತಿಳಿದಿರುವುದು ಅರಿವಿಗೆ ಬಂದಿರುವ ಘಟನೆ ಶುಕ್ರವಾರ ಮಂಗಳೂರಿನ ಗುರುಪುರದಲ್ಲಿ ನಡೆದಿದೆ.
ಮಂಗಳೂರಿನ ವಿವಾಹಿತ ಮಹಿಳೆಯೊಬ್ಬಳು ಬಿಹಾರದ ಗೆಳೆಯನೊಂದಿಗೆ ಬಸ್ನಲ್ಲಿ ಸಂಚರಿಸುತ್ತಿದ್ದಳು. ಮೂಡುಬಿದಿರೆಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್ನಲ್ಲಿದ್ದ ಯುವಕ ಮತ್ತು ಗೃಹಿಣಿಯನ್ನು ನೋಡಿದವರು ಅವರು ಅನ್ಯಮತೀಯ ಜೋಡಿ ಎಂದು ಗುರುಪುರದ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು.