ಮಂಗಳೂರು: ಕೊರೊನಾ ಭೀತಿ ಹಿನ್ನೆಲೆ ಇಂದು 83 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಒಟ್ಟು 429 ಮಂದಿಯ ವರದಿ ಬಾಕಿಯಿದೆ.
ದ.ಕ ಜಿಲ್ಲೆಯಲ್ಲಿ ಇಂದು 83 ಮಂದಿಯ ಗಂಟಲು ದ್ರವ ಪರೀಕ್ಷೆಗೆ ರವಾನೆ: 429 ವರದಿ ಬಾಕಿ - ಗಂಟಲು ದ್ರವ ಪರೀಕ್ಷೆಗೆ ರವಾನೆ, 429 ವರದಿ ಬಾಕಿ
ಕೊರೊನಾ ಶಂಕೆ ಹಿನ್ನೆಲೆ ಇಂದು 83 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಒಟ್ಟು 429 ಮಂದಿಯ ವರದಿ ಬಾಕಿಯಿದೆ.
ಈ ಹಿಂದೆ ಕಳುಹಿಸಲಾದ 48 ಮಂದಿಯ ಗಂಟಲು ದ್ರವದ ಪರೀಕ್ಷೆ ವರದಿಯಲ್ಲಿ 47 ನೆಗೆಟಿವ್ ಬಂದಿದ್ದು, ಒಂದು ಪಾಸಿಟಿವ್ ಬಂದಿತ್ತು. ಈವರೆಗೆ 940 ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಇದರಲ್ಲಿ 16 ಪಾಸಿಟಿವ್ ಮತ್ತು 924 ನೆಗೆಟಿವ್ ಬಂದಿವೆ. ಇಂದು 64 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಈವರೆಗೆ ಒಟ್ಟು 39,246 ಮಂದಿಯನ್ನು ಸ್ಕ್ರೀನಿಂಗ್ ಮಾಡಿದಂತಾಗಿದೆ.
ಹೋಮ್ ಕ್ವಾರಂಟೈನ್ನಲ್ಲಿ 31 ಮಂದಿ ಇದ್ದು, 10 ಮಂದಿ ಇಎಸ್ಐ ಆಸ್ಪತ್ರೆಯಲ್ಲಿ, 39 ಮಂದಿ ಎನ್ಐಟಿಕೆ ಕ್ವಾರಂಟೈನ್ನಲ್ಲಿ ಇದ್ದಾರೆ. 6042 ಮಂದಿ 28 ದಿನದ ಹೋಮ್ ಕ್ವಾರಂಟೈನ್ ಪೂರೈಸಿದ್ದಾರೆ. ಕೊರೊನಾ ಪಾಸಿಟಿವ್ ಬಂದಿದ್ದ 12 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಒಬ್ಬರು ಸಾವನ್ನಪ್ಪಿ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.
TAGGED:
ಕೊರೊನಾ ಭೀತಿ ಹಿನ್ನೆಲೆ