ಉಪ್ಪಿನಂಗಡಿ: ಅಕ್ರಮವಾಗಿ ಕಂಟೈನರ್ ನಲ್ಲಿ 800 ಕೆಜಿ ಗೋವಿನ ಮಾಂಸವನ್ನು ಸಾಗಿಸುತ್ತಿದ್ದ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಕ್ರಮವಾಗಿ ಕಂಟೈನರ್ನಲ್ಲಿ ಗೋಮಾಂಸ ಸಾಗಿಸುತ್ತಿದ್ದ ಆರೋಪಿ ಅಂದರ್ - ಉಪ್ಪಿನಂಗಡಿ ಅಕ್ರಮ ಗೋಮಾಂಸ ಸಾಗಾಟ ಸುದ್ದಿ
ಅಕ್ರಮವಾಗಿ ಗೋ ಮಾಂಸವನ್ನು ಕಂಟೈನರ್ ನಲ್ಲಿ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಉಪ್ಪಿನಂಗಡಿ ಪೊಲೀಸರು ಓರ್ವನನ್ನು ಬಂಧಿಸಿ, ಕಂಟೈನರ್ ಸಹಿತ 800 ಕೆಜಿ ಗೋವಿನ ಮಾಂಸವನ್ನು ವಶಪಡಿಸಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ.
![ಅಕ್ರಮವಾಗಿ ಕಂಟೈನರ್ನಲ್ಲಿ ಗೋಮಾಂಸ ಸಾಗಿಸುತ್ತಿದ್ದ ಆರೋಪಿ ಅಂದರ್ 800-kg-beef-shipping-in-containers-illegally-in-uppinangadi](https://etvbharatimages.akamaized.net/etvbharat/prod-images/768-512-5310695-thumbnail-3x2-goa.jpg)
ಅಕ್ರಮವಾಗಿ ಕಂಟೈನರ್ನಲ್ಲಿ 800 ಕೆಜಿ ಗೋಮಾಂಸ ಸಾಗಾಟ
ಖಚಿತ ಮಾಹಿತಿ ಮೇರೆಗೆ ಶಿರಾಡಿ ಗ್ರಾಮದ ಗುಂಡ್ಯ ಬಳಿ ಪೊಲೀಸರು ವಾಹನ ತಪಾಸಣೆ ಮಾಡುವ ವೇಳೆ ಅನುಮಾನ ಬಂದು ಕಂಟೈನರ್ ಪರೀಕ್ಷಿಸಿದಾಗ, 800 ಕೆಜಿಯ ಭಾರಿ ಪ್ರಮಾಣದ ದನದ ಮಾಂಸ ಪತ್ತೆಯಾಗಿದೆ. ಈ ಕುರಿತು ಲಾರಿ ಚಾಲಕ ಬಂದಾರ್ ನಿವಾಸಿ ರಿಝ್ವಾನ್ ಎಂಬಾತನನ್ನು ಬಂಧಿಸಿ ವಿಚಾರಿಸಿದಾಗ, ಚನ್ನರಾಯಪಟ್ಟಣದಿಂದ ಗೋಮಾಂಸವನ್ನು ಮಂಗಳೂರಿನ ಝುಲ್ಫಿಕರ್ ಎಂಬಾತನಿಗೆ ತಲುಪಿಸುತ್ತಿರುವುದಾಗಿ ತಿಳಿಸಿದ್ದಾನೆ ಎಂದು ಹೇಳಲಾಗ್ತಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 2 ಲಕ್ಷ ರೂ. ಮೌಲ್ಯದ ಮಾಂಸ ಹಾಗೂ ವಾಹನವನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
Last Updated : Dec 8, 2019, 8:49 PM IST