ಕರ್ನಾಟಕ

karnataka

ETV Bharat / city

ರಾಷ್ಟ್ರಮಟ್ಟದ ಈಜು ಸ್ಪರ್ಧೆ : ಮಂಗಳೂರಿನ 7 ಮಂದಿ ಚಿಣ್ಣರು ಆಯ್ಕೆ - Mangalore

ಈ‌ ಈಜು ಪಟುಗಳಿಗೆ ಬೆಂಗಳೂರಿನ ಡಾಲ್ಫಿನ್ ಎಕ್ವಾಟಿಕ್ ಕ್ಲಬ್ ತರಬೇತುದಾರರು ಮತ್ತು ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾದ ನಿಹಾರ್ ಅಮೀನ್ ಮತ್ತು ಮಧು ಕುಮಾರ್ ಮುಖ್ಯ ತರಬೇತುದಾರ ಲೋಕರಾಜ್ ವಿಟ್ಲ ಹಾಗೂ ಯಜ್ಞೇಶ್ ಬೆಂಗ್ರೆ, ಉಮೇಶ್ ವಿಟ್ಲ, ದೀಪಕ್ ತರಬೇತಿ ನೀಡಿದ್ದಾರೆ..

ಮಂಗಳೂರಿನ 7 ಮಂದಿ ಚಿಣ್ಣರು ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆ
ಮಂಗಳೂರಿನ 7 ಮಂದಿ ಚಿಣ್ಣರು ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆ

By

Published : Oct 4, 2021, 8:42 PM IST

Updated : Oct 4, 2021, 10:37 PM IST

ಮಂಗಳೂರು :ಕರ್ನಾಟಕ ಈಜು ಸಂಸ್ಥೆಯ ವತಿಯಿಂದ ಬೆಂಗಳೂರಿನ ಬಸವನಗುಡಿ ಸ್ವಿಮ್ಮಿಂಗ್ ಕ್ಲಬ್ ಈಜುಕೊಳದಲ್ಲಿ ನಡೆದ ಜೂನಿಯರ್ ಹಾಗೂ ಸಬ್ ಜೂನಿಯರ್ ಚಾಂಪಿಯನ್ ಶಿಪ್​​ನಲ್ಲಿ ಮಂಗಳೂರಿನ ‌ಏಳು ಮಂದಿ ಚಿಣ್ಣರು ಒಟ್ಟು ಮೂರು ಪದಕ ಬಾಚಿಕೊಂಡಿದ್ದಾರೆ. ಇದೇ ಸ್ಪರ್ಧಿಗಳು ಅ.19ರಂದು ಬೆಂಗಳೂರಿನ ಬಿಎಸಿ ಈಜುಕೊಳದಲ್ಲಿ ಭಾರತೀಯ ಈಜು ಕೂಟದಿಂದ ನಡೆಯುವ ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ರಾಷ್ಟ್ರಮಟ್ಟದ ಈಜು ಸ್ಪರ್ಧೆ : ಮಂಗಳೂರಿನ 7 ಮಂದಿ ಚಿಣ್ಣರು ಆಯ್ಕೆ

ಮಂಗಳೂರಿನ 'ಸಂತ ಅಲೋಶಿಯಸ್ ವಿ ಒನ್ ಅಕ್ವಾ ಸೆಂಟರ್ ಸ್ವಿಮ್ಮಿಂಗ್ ಪೂಲ್'ನ ವಿದ್ಯಾರ್ಥಿಗಳಾಗಿರುವ ಈ‌ 7 ಮಂದಿ ಸ್ಪರ್ಧಿಗಳು ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿ ತಲಾ 13 ಬಂಗಾರ, 13 ಬೆಳ್ಳಿ ಹಾಗೂ 7 ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಜೂನಿಯರ್ ಹಾಗೂ ಸಬ್ ಜೂನಿಯರ್ ಚಾಂಪಿಯನ್‌ಶಿಪ್​​ನಲ್ಲಿ ಮಂಗಳೂರಿಗೆ 33 ಪದಕ ಲಭಿಸಿವೆ.

ಈ ಈಜು ವಿದ್ಯಾರ್ಥಿಗಳಲ್ಲಿ ಎಲಿಸ್ಸಾ ಎಸ್ ರೇಗೊ ವೈಯುಕ್ತಿಕ ಚಾಂಪಿಯನ್‌ಶಿಪ್ ಪಡೆದುಕೊಂಡರೆ, ಧೃತಿ ಫರ್ನಾಂಡಿಸ್ 4×200 ರಿಲೇ ವಿಭಾಗದಲ್ಲಿ ಹೊಸ ಕೂಟ ದಾಖಲೆ ಸೃಷ್ಟಿಸಿದ್ದಾರೆ. ಜೊತೆಗೆ ನೈತಿಕ್ ಎನ್., ಅಲೈಸ್ಟರ್ ಸ್ಯಾಮ್ಯುಯೆಲ್ ರೇಗೊ, ಸ್ಟೀವ್ ಜೆಫ್ ರೇಗೊ, ನಿಶಾನ್, ದ್ವೀಶಾ ಶೆಟ್ಟಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ‌.

ಈ‌ ಈಜು ಪಟುಗಳಿಗೆ ಬೆಂಗಳೂರಿನ ಡಾಲ್ಫಿನ್ ಎಕ್ವಾಟಿಕ್ ಕ್ಲಬ್ ತರಬೇತುದಾರರು ಮತ್ತು ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾದ ನಿಹಾರ್ ಅಮೀನ್ ಮತ್ತು ಮಧು ಕುಮಾರ್ ಮುಖ್ಯ ತರಬೇತುದಾರ ಲೋಕರಾಜ್ ವಿಟ್ಲ ಹಾಗೂ ಯಜ್ಞೇಶ್ ಬೆಂಗ್ರೆ, ಉಮೇಶ್ ವಿಟ್ಲ, ದೀಪಕ್ ತರಬೇತಿ ನೀಡಿದ್ದಾರೆ.

ಇದನ್ನೂ ಓದಿ:ಜಪಾನ್​ನ ಈಜು ಸ್ಪರ್ಧೆಗೆ ತೆರಳಲಿದ್ದಾರೆ ಶಿವಮೊಗ್ಗದ ಈಜುಪಟುಗಳು

Last Updated : Oct 4, 2021, 10:37 PM IST

ABOUT THE AUTHOR

...view details