ಕರ್ನಾಟಕ

karnataka

ETV Bharat / city

ಉಡುಪಿಯಲ್ಲಿಂದು ಐವರಲ್ಲಿ ಕೊರೊನಾ ದೃಢ: ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆ

ಕರಾವಳಿ ಭಾಗದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಉಡುಪಿಯಲ್ಲಿ ಇಂದು 5 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಮುಂಬೈನಿಂದ ಬಂದು ಕ್ವಾರಂಟೈನ್​​ನಲ್ಲಿದ್ದವರಲ್ಲಿ ಸೋಂಕು ಕಂಡುಬಂದಿದೆ.

5 more coronavirus cases Confirmed in Udupi today: total cases raised to 16
ಉಡುಪಿಯಲ್ಲಿಂದು ಐವರಲ್ಲಿ ಕೊರೊನಾ ದೃಢ: ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆ

By

Published : May 19, 2020, 9:08 PM IST

ಉಡುಪಿ:ಜಿಲ್ಲೆಯಲ್ಲಿಂದು 5 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ.

ಮುಂಬೈನಿಂದ ಬಂದು ಕ್ವಾರಂಟೈನ್​​ನಲ್ಲಿದ್ದ ನಾಲ್ವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ನಾಲ್ವರು ಕ್ವಾರಂಟೈನ್ ಸೆಂಟರ್​ನಲ್ಲಿದ್ದ ಸಂದರ್ಭ ಕೊರೊನಾ ಲಕ್ಷಣ ಕಂಡುಬಂದಿತ್ತು. ತಕ್ಷಣ ಟೆಸ್ಟ್ ಮಾಡಲಾಗಿತ್ತು. ಈ ಸಂದರ್ಭ ಸೋಂಕಿರುವುದು ದೃಢಪಟ್ಟಿದೆ.

ಸೋಂಕಿತರ ಪೈಕಿ 38 ವರ್ಷದ ವ್ಯಕ್ತಿ, ಮುಂಬೈನಲ್ಲಿ ಕೊರೊನಾ ಟೆಸ್ಟ್ ಮಾಡಿಸಿ ವರದಿ ಬರುವ ಮೊದಲೇ ಉಡುಪಿಗೆ ಬಂದಿದ್ದ. ಮುಂಬೈ ಮತ್ತು ಉಡುಪಿಯಲ್ಲಿ ಆತನ ಕೊರೊನಾ ವರದಿ ಪಾಸಿಟಿವ್ ಬಂದಿದೆ. ಆತ ತನ್ನ ಅಣ್ಣನ ಮಗ 8 ವರ್ಷದ ಬಾಲಕನಿಗೆ ಸೋಂಕು ಹರಡಿದ್ದಾನೆ. ನಾಲ್ವರ ಪೈಕಿ ಓರ್ವ ಮಹಿಳೆ ಗರ್ಭಿಣಿ ಎಂದು ಡಿಹೆಚ್​​ಓ ಡಾ. ಸುಧೀರ್ ಚಂದ್ರ ಮಾಹಿತಿ ನೀಡಿದ್ದಾರೆ.

ಚಿತ್ರದುರ್ಗ ಮೂಲದ ಕ್ಯಾನ್ಸರ್ ಪೀಡಿತ ಯುವತಿಗೆ ಕೊರೊನಾ ಸೋಂಕು ದೃಢವಾಗಿದೆ. 17 ವರ್ಷದ ಯುವತಿ 4 ದಿನದ ಹಿಂದೆ ಮಣಿಪಾಲ್ ಕೆಎಂಸಿಗೆ ಚಿಕಿತ್ಸೆಗೆಂದು ದಾಖಲಾಗಿದ್ದರು. ಆಕೆಯ ಗಂಟಲು ದ್ರವವನ್ನು ಟೆಸ್ಟ್ ಮಾಡಲಾಗಿತ್ತು. ಈ ಸಂದರ್ಭ ಆಕೆಗೂ ಕೊರೊನಾ ದೃಢಪಟ್ಟಿದೆ. ಎಲ್ಲರನ್ನು ಉಡುಪಿಯ ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಉಡುಪಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ. ಬೈಂದೂರಿನ ನಾಲ್ವರು ಮತ್ತು ಮಣಿಪಾಲ್ ಕೆಎಂಸಿ ರೋಗಿಯ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details