ಕರ್ನಾಟಕ

karnataka

ETV Bharat / city

ಉಚ್ಚಿಲ ಶ್ರೀ ಮಹಾಲಕ್ಷ್ಮಿಗೆ ಮೀನಿನ ವಿನ್ಯಾಸದ 400 ಗ್ರಾಂ ಬಂಗಾರದ ಸರ ಅರ್ಪಣೆ - fish chain

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಿಗೆ ಮಂಗಳೂರಿನ ಮೀನುಗಾರರು ಮೀನಿನ ವಿನ್ಯಾಸವುಳ್ಳ 400 ಗ್ರಾಂ ಬಂಗಾರದ ಸರ ಅರ್ಪಿಸಿದ್ದಾರೆ.

fish design gold chain
ಬಂಗುಡೆ ಮೀನಿನ ವಿನ್ಯಾಸವುಳ್ಳ ಬಂಗಾರದ ಸರ

By

Published : Apr 7, 2022, 3:30 PM IST

ಮಂಗಳೂರು (ದಕ್ಷಿಣ ಕನ್ನಡ):ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಿಗೆ ಮಂಗಳೂರಿನ ಮೀನುಗಾರರು ಬಂಗುಡೆ ಮೀನಿನ ವಿನ್ಯಾಸವುಳ್ಳ 400 ಗ್ರಾಂ ಬಂಗಾರದ ಸರವನ್ನು ಅರ್ಪಿಸಿದ್ದಾರೆ. ಕರಾವಳಿಯಲ್ಲಿ‌ ಬಂಗುಡೆ ಮೀನಿಗೆ ವಿಪರೀತ ಬೇಡಿಕೆಯಿದೆ. ಇದೇ ಮೀನಿನ ವಿನ್ಯಾಸ/ಆಕಾರವನ್ನು ಬಳಸಿ ಸರ ತಯಾರಿಸಲಾಗಿದೆ. ಮೀನುಗಾರರು ತಾವು ಆರಾಧಿಸುವ ದೇವಿಗೆ ಭಕ್ತಿಯಿಂದ ಇದನ್ನು ಸಮರ್ಪಿಸಿದ್ದಾರೆ.

ಇದನ್ನೂ ಓದಿ:ಮುಸ್ಕಾನ್ ಮುಗ್ಧ ಹುಡುಗಿ.. ಅಲ್​​ಖೈದಾದಿಂದ ಜನರ ಮುಗ್ಧತೆ ಅಸ್ತ್ರವಾಗಿ ಬಳಕೆ: ಸಚಿವ ಸುಧಾಕರ್

ಉಡುಪಿ ಜಿಲ್ಲೆಯ ಉಚ್ಚಿಲದಲ್ಲಿರುವ ಮೊಗವೀರ ಸಮಾಜದ ಪ್ರಧಾನ ಆರಾಧನಾ ಕ್ಷೇತ್ರವಾಗಿರುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬುಧವಾರ ಸ್ವರ್ಣ ಶಿಖರ ಪ್ರತಿಷ್ಠೆ, ದೇವಿಯ ಬಿಂಬ ಪ್ರತಿಷ್ಠೆ, ಪ್ರಸನ್ನ ಗಣಪತಿ ಮತ್ತು ಭದ್ರಕಾಳಿ ದೇವಿಯ ಬಿಂಬ ಪ್ರತಿಷ್ಠೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನಡೆದಿತ್ತು.

ABOUT THE AUTHOR

...view details