ಮಂಗಳೂರು: ಕರಾವಳಿಯ ನಾಲ್ವರು ರೂಪದರ್ಶಿಯರು ಮಿಸೆಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಮಂಗಳೂರಿನ ಪಾತ್ ವೇ ಎಂಟರ್ಪ್ರೈಸಸ್ನಿಂದ ಮಂಗಳೂರಿನ ನಾಲ್ವರು ರೂಪದರ್ಶಿಯರು ಸ್ಪರ್ಧಿಸಿ, ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ವಿಶೇಷ.ನಗರದ ಜೂಲಿಯಟ್, ಮಿಸೆಸ್ ಇಂಡಿಯಾ ಕರ್ನಾಟಕದ 60 ವರ್ಷ ವಯಸ್ಸು ಮೇಲ್ಪಟ್ಟ ವಿಭಾಗವಾದ ಸೂಪರ್ ಕ್ಲಾಸಿಕ್ ವಿಭಾಗದಲ್ಲಿ ವಿನ್ನರ್ ಆಗಿ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಮುಖ್ಯ ವಿಜೇತರಾಗಿ ಮಿಸೆಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅದೇ ವಿಭಾಗದಲ್ಲಿ ಮಂಗಳೂರಿನ ಇಂದಿರಾ, ತೃತೀಯ ರನ್ನರ್ ಅಪ್ ಇನ್ಸ್ಪಿರೇಷನಲ್ ಪ್ರಶಸ್ತಿ ಪಡೆದು ಆಯ್ಕೆಯಾಗಿದ್ದಾರೆ.