ಮಂಗಳೂರು: ಈ ಬಾರಿ ದ್ವಿತೀಯ ಪಿಯುಸಿ ಶೇಕಡಾವಾರು ಫಲಿತಾಂಶದಲ್ಲಿ 'ದಕ್ಷಿಣ ಕನ್ನಡ' ಜಿಲ್ಲೆ ಶೇ. 90.71 ಫಲಿತಾಂಶ ಪಡೆದುಕೊಂಡಿದೆ. ಇದು ರಾಜ್ಯದಲ್ಲಿ ಅತ್ಯಧಿಕವಾಗಿದೆ. ಕಳೆದ ವರ್ಷ ಷಕೂಡ ದಕ್ಷಿಣ ಕನ್ನಡ ಜಿಲ್ಲೆ ಶೇ. 88.02 ರಷ್ಟು ಫಲಿತಾಂಶ ಗಳಿಸಿ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿತ್ತು. ಈ ಬಾರಿ ಶೇ.2.69 ಹೆಚ್ಚುವರಿ ಪಡೆದು ಮತ್ತೆ ಪ್ರಥಮ ಸ್ಥಾನದಲ್ಲಿದೆ.
ವಾಣಿಜ್ಯ ವಿಭಾಗದಲ್ಲಿ ಮೂವರು, ಸೈನ್ಸ್ನಲ್ಲಿ ಇಬ್ಬರು ಟಾಪರ್ಸ್: ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಟಾಪರ್ಸ್ ಆಗಿದ್ದಾರೆ.