ಮಂಗಳೂರು:ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಯುವಕ ಹಾಗೂ ಯುವತಿ ನಾಪತ್ತೆಯಾಗಿರುವ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಹರಿಹರ ಪಲ್ಲತಡ್ಕ ಗ್ರಾಮದ ಕಲ್ಲೆಮಠದ ಯುವತಿಯೊಬ್ಬರು ಜೂನ್ 3ರಂದು ನಾಪತ್ತೆಯಾಗಿದ್ದಾಳೆ. ತಾನು ಇಷ್ಟಪಟ್ಟ ಹುಡುಗನೊಂದಿಗೆ ಓಡಿ ಹೋಗುವುದಾಗಿ ಪತ್ರ ಬರೆದಿಟ್ಟಿದ್ದಾಳೆ ಎಂದು ಹೇಳಲಾಗುತ್ತಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರತ್ಯೇಕ ಪ್ರಕರಣಗಳಲ್ಲಿ ಯುವತಿ ಸೇರಿ ಇಬ್ಬರು ನಾಪತ್ತೆ: ಸುಬ್ರಮಣ್ಯ ಪೊಲೀಸರ ತನಿಖೆ - ಯುವತಿ ನಾಪತ್ತೆ
ಸುಬ್ರಮಣ್ಯ ಠಾಣೆಯಲ್ಲಿ ಯುವಕ ಹಾಗೂ ಯುವತಿ ಕಾಣೆಯಾದ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಾಪತ್ತೆಯಾದ ಯುವತಿ
ಮತ್ತೊಂದು ಪ್ರಕರಣದಲ್ಲಿ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕುಂಬ್ಲಾಡಿಯ ಅಭಿಲಾಷ್ ಎಂಬ ಯುವಕ ನಾಪತ್ತೆಯಾಗಿದ್ದು, ಕೆಎಸ್ಆರ್ಟಿಸಿ ತಂಗುದಾಣದಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಕೆಲವು ದಿನಗಳಿಂದ ಪೋಷಕರು ಯುವಕನಿಗಾಗಿ ಹುಡುಕಾಡಿದ್ದು, ಪತ್ತೆಯಾಗದ ಕಾರಣದಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.