ಬಂಟ್ವಾಳ: ತಾಲೂಕಿನಲ್ಲಿ ನಾಳೆ ನಡೆಯಲಿರುವ ಪ್ರಥಮ ಹಂತದ ಗ್ರಾಪಂ ಚುನಾವಣೆ ಹಿನ್ನೆಲೆ ಈಗಾಗಲೇ ಚುನಾವಣಾ ಸಾಮಗ್ರಿಗಳನ್ನು ಹಂಚಿಕೆ ಮಾಡಲಾಗಿದ್ದು, ಎಲ್ಲರೂ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು ಎಂದು ಮಂಗಳೂರು ಸಹಾಯಕ ಕಮಿಷನರ್ ಮದನ್ ಮೋಹನ್ ಹೇಳಿದ್ದಾರೆ.
ಗ್ರಾಮ ಸಮರಕ್ಕೆ ಅಖಾಡ ಸಿದ್ಧ: ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ - bantwal panchayat elelction
ಬಂಟ್ವಾಳ ತಾಲೂಕಿನ 57 ಗ್ರಾಮ ಪಂಚಾಯತ್ಗಳ 822 ಸ್ಥಾನಗಳಿಗೆ ನಾಳೆ ಮೊದಲ ಹಂತದ ಮತದಾನ ನಡೆಯಲಿದ್ದು, ಒಟ್ಟು 2,75,097 ಮಂದಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಪ್ರತಿಯೊಂದು ಬೂತ್ಗೆ ತಲಾ 6ರಂತೆ ಒಟ್ಟು 2,376 ಮಂದಿ ನಿಗದಿಪಡಿಸಲಾಗಿರುವ ಬೂತ್ಗಳಿಗೆ ಇಂದು ತೆರಳಿದ್ದಾರೆ ಎಂದು ಮಂಗಳೂರು ಸಹಾಯಕ ಕಮಿಷನರ್ ಮದನ್ ಮೋಹನ್ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ 396 ಮತಗಟ್ಟೆಗಳಲ್ಲಿ 57 ಗ್ರಾಮ ಪಂಚಾಯತ್ಗಳ 822 ಸ್ಥಾನಗಳಿಗೆ ನಾಳೆ ಮೊದಲ ಹಂತದ ಮತದಾನ ನಡೆಯಲಿದ್ದು, ಒಟ್ಟು 2,75,097 ಮಂದಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿ.ಸಿ. ರೋಡ್ನ ಮೊಡಂಕಾಪುವಿನಿಂದ 155 ವಾಹನಗಳಲ್ಲಿ ಪ್ರತಿಯೊಂದು ಬೂತ್ಗೆ ತಲಾ 6ರಂತೆ ಒಟ್ಟು 2,376 ಮಂದಿ ನಿಗದಿಪಡಿಸಲಾಗಿರುವ ಬೂತ್ಗಳಿಗೆ ಇಂದು ತೆರಳಿದ್ದಾರೆ.
ತಾಲೂಕಿನ 57 ಗ್ರಾಪಂಗಳ 837 ಸ್ಥಾನಗಳ ಪೈಕಿ 15 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 822 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1,925 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 46 ಅತಿ ಸೂಕ್ಷ್ಮ, 86 ಸೂಕ್ಷ್ಮ ಹಾಗೂ 264 ಸಾಮಾನ್ಯ ಮತಗಟ್ಟೆಗಳು ಸೇರಿದಂತೆ ಒಟ್ಟು 396 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಪ್ರತಿ ಮತಗಟ್ಟೆಗಳಲ್ಲಿ ತಲಾ 6 ಮಂದಿಯಂತೆ ಸುಮಾರು 2376 ಸಿಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.