ಮಂಗಳೂರು: ಪ್ಲಾಟ್ ನೀಡುವ ಬಗ್ಗೆ ವೆಬ್ಸೈಟ್ವೊಂದರಲ್ಲಿ ಜಾಹೀರಾತು ನೀಡಿದ್ದ ವ್ಯಕ್ತಿಗೆ ಸೈನಿಕನ ಹೆಸರಿನಲ್ಲಿ ಫೋನ್ ಮಾಡಿ 2.23 ಲಕ್ಷ ರೂ. ಪಂಗನಾಮ ಹಾಕಿರುವ ಘಟನೆ ನಗರದಲ್ಲಿ ನಡೆದಿದೆ.
ಮಂಗಳೂರಿನ ವ್ಯಕ್ತಿಯೊಬ್ಬರು ವೆಬ್ಸೈಟ್ವೊಂದರಲ್ಲಿ ತಮ್ಮ ಪ್ಲಾಟ್ ಬಾಡಿಗೆ ನೀಡುವ ಕುರಿತು ಜಾಹೀರಾತು ಹಾಕಿದ್ದರು. ಅಂಕಿತ್ ವಿಜಯ್ ಪಂಗನಾಮ ಹಾಕಿದ ಆರೋಪಿ. ಈತ ಫೋನ್ ಮಾಡಿ, ತಾನು ಸೈನಿಕನೆಂದು ನಂಬಿಸಿದ್ದಾನೆ. ಜೊತೆಗೆ ಮಿಲಿಟರಿ ವಸ್ತ್ರದಲ್ಲಿರುವ ಫೋಟೋ ಸಹ ಕಳುಹಿಸಿ, ನಮ್ಮ ಮನೆಯವರಿಗೆ ಈ ಪ್ಲಾಟ್ ಇಷ್ಟವಾಗಿದ್ದು, ಅದನ್ನು ಖರೀದಿಸುವುದಾಗಿ ಹೇಳಿದ್ದಾನೆ. ನಮ್ಮ ಅಕೌಂಟೆಂಟ್ ರಣದೀಪ್ ಸಿಂಗ್ ಹಾಗೂ ಮೇಲಾಧಿಕಾರಿ ದೆಹಲಿಯಲ್ಲಿದ್ದು, ಅವರು ಹಣ ಪಾವತಿಸಲಿದ್ದಾರೆ ಎಂದು ತಿಳಿಸಿದ್ದಾನೆ.