ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾ ಉಸಿರುಗಟ್ಟಿಸುವ ಆಘಾತ ನೀಡಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ 16 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 50ಕ್ಕೆ ತಲುಪಿದೆ.
ಮಂಗಳೂರಿಗೆ ಕೊರೊನಾಘಾತ: ಇಂದು 6 ವರ್ಷದ ಬಾಲಕ ಸೇರಿ 16 ಮಂದಿಗೆ ಸೋಂಕು! - ದಕ್ಷಿಣ ಕನ್ನಡದಲ್ಲಿ 16 ಮಂದಿಗೆ ಸೋಂಕು
ದಕ್ಷಿಣ ಕನ್ನಡದಲ್ಲಿ ಇಂದು 16 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.
ಸೋಂಕಿತರ ಸಂಖ್ಯೆ
ಮೇ 12ರಂದು ದುಬೈ ವಿಮಾನದಲ್ಲಿ ಬಂದಿದ್ದ 15 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಇನ್ನೊಬ್ಬರು ತೀವ್ರ ಉಸಿರಾಟದ ತೊಂದರೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೂ ಸೋಂಕು ಅಂಟಿದೆ. ಇದರಲ್ಲಿ 6 ವರ್ಷದ ಬಾಲಕ ಸೇರಿದಂತೆ 12 ಪುರುಷರು ಮತ್ತು ನಾಲ್ವರು ಮಹಿಳೆಯರಿದ್ದಾರೆ.
50 ಕೊರೊನಾ ಸೋಂಕಿತರ ಪೈಕಿ 16 ಮಂದಿ ಗುಣಮುಖರಾಗಿದ್ದು, ಐವರು ಸಾವನ್ನಪ್ಪಿದ್ದಾರೆ. 29 ಸಕ್ರಿಯ ಪ್ರಕರಣಗಳಿವೆ.