ಮಂಗಳೂರು: ಶಾಲೆಯಲ್ಲಿ ಒಂದೋ ಎರಡೋ ಅವಳಿ ಮಕ್ಕಳಿರುವುದು ಸಾಮಾನ್ಯ. ಆದರೆ, ಒಂದೇ ಸೂರಿನಡಿ ಹನ್ನೊಂದು ಅವಳಿ ಮಕ್ಕಳಿರುವ ಶಾಲೆಯೊಂದು ಮಂಗಳೂರು ಹೊರವಲಯದ ಕೈರಂಗಳದಲ್ಲಿ ಇದೆ.
ಮಂಗಳೂರಿನಲ್ಲಿ ಶಾಲೆಯ ಹೆಸರಿಗೆ ತಕ್ಕಂತೆ ಒಂದೇ ಸೂರಲ್ಲಿ 11 ಅವಳಿ ವಿದ್ಯಾರ್ಥಿಗಳ ಮೋಡಿ ಕೈರಂಗಳದಲ್ಲಿರುವ ಪುಣ್ಯಕೋಟಿ ನಗರದಲ್ಲಿ ಶಾರದಾ ಗಣಪತಿ ಎಂಬ ವಿದ್ಯಾಕೇಂದ್ರ ಈ ವಿಶೇಷ ಕಾರಣಕ್ಕಾಗಿ ಗಮನ ಸೆಳೆಯುತ್ತಿದೆ. ಶಾಲೆಯಲ್ಲಿ 11 ಜೋಡಿ ಅವಳಿ ಮಕ್ಕಳಿದ್ದಾರೆ. 4ನೇ ತರಗತಿಯಲ್ಲಿ 3 ಜೋಡಿ, 5ನೇ ತರಗತಿಯಲ್ಲಿ 2 ಹಾಗೂ 6,7,8 ಮತ್ತು 10 ನೇ ತರಗತಿಯಲ್ಲಿ ತಲಾ 1 ಹಾಗೂ ಪಿಯುಸಿಯಲ್ಲಿ 2 ಜೋಡಿ ಅವಳಿಗಳಿದ್ದಾರೆ.
ಒಂದೇ ಶಾಲೆಯಲ್ಲಿ 11 ಅವಳಿ ವಿದ್ಯಾರ್ಥಿಗಳು ಶಾಲೆಯ 4ನೇ ತರಗತಿಯಲ್ಲಿ ಜ್ಞಾನೇಶ್- ಜಯೇಶ್, ಸಂಜನ- ಸಂಜಯ, ಲತೇಶ್- ಲವೇಶ್, 5ನೇ ತರಗತಿಯಲ್ಲಿ ಧನ್ಯಶ್ರೀ- ಧನುಷ್, ಚೈತ್ರ- ಚಂದನ, 6ನೇ ತರಗತಿಯಲ್ಲಿ ಭವ್ಯಶ್ರೀ- ದಿವ್ಯಶ್ರೀ, 7ನೇ ತರಗತಿಯಲ್ಲಿ ಕೀರ್ತಿ- ಕೀರ್ತನಾ, 8ನೇ ತರಗತಿಯಲ್ಲಿ ಸುಜನ- ಸುಹನ, 10ನೇ ತರಗತಿಯಲ್ಲಿ ಶ್ರೀನಾಥ್- ಸುಶಾಂತ್, ದ್ವಿತೀಯ ಪಿಯುಸಿಯಲ್ಲಿ ಪ್ರೇಕ್ಷ - ಪ್ರಜ್ಞ, ಮೋಕ್ಷ- ಮೋಕ್ಷಿತ ಎಂಬ ವಿದ್ಯಾರ್ಥಿ ಅವಳಿಗಳಿದ್ದಾರೆ. ಸದ್ಯ ಈ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ 11 ಜೋಡಿ ಅವಳಿ ಮಕ್ಕಳು ಈ ಪೈಕಿ 4 ಜೋಡಿ ಹೆಣ್ಣು, 4 ಜೋಡಿ ಗಂಡು ಹಾಗೂ 3 ಜೋಡಿ ಗಂಡು ಹೆಣ್ಣು ಮಕ್ಕಳು ಇದ್ದಾರೆ. ಈ ಶಾಲೆಯ ಹೆಸರು ಶಾರದಾ ಗಣಪತಿ ಎಂಬುದಾಗಿದ್ದು, ಇದು ಕೂಡ ಅವಳಿ ಹೆಸರಾಗಿದೆ. ಈ ಅವಳಿ ಹೆಸರಿನಲ್ಲಿರುವ ಶಾಲೆಯಲ್ಲಿ ಅವಳಿ ಮಕ್ಕಳ ಜೋಡಿ ಮೋಡಿ ಮಾಡುತ್ತಿದೆ. ಒಂದೇ ಶಾಲೆಯಲ್ಲಿ 11 ಅವಳಿ ವಿದ್ಯಾರ್ಥಿಗಳು ಇದನ್ನೂ ಓದಿ:ಮಂಗಳೂರು: ಮನೆಯವರು ಬರುವ ಮುಂಚೆಯೇ ಬಾಲಮಂದಿರದಿಂದ ಇಬ್ಬರು ಬಾಲಕರು ನಾಪತ್ತೆ