ಬಂಟ್ವಾಳ:ತಾಲೂಕಿನ ಕನ್ಯಾನ ಎಂಬಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಬಾಲಕಿ ತಂದೆ ನೀಡಿದ ದೂರಿನಂತೆ ಯುವಕನೊಬ್ಬನ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 'ತಂದೆ, ತಾಯಿಯನ್ನು ಬಿಟ್ಟು ನನ್ನೊಂದಿಗೆ ಬಾ, ಇಲ್ಲವಾದರೆ ಸಾಯಿ..' ಎಂದು ಪ್ರೀತಿಸಲು ಒತ್ತಾಯಿಸುತ್ತಿದ್ದ ಅನ್ಯ ಕೋಮಿನ ಯುವಕನ ಪ್ರಚೋದನೆಯೇ ಆತ್ಮಹತ್ಯೆಗೆ ಕಾರಣ ಎಂದು ತಂದೆ ವಿಟ್ಲ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದರ ಜತೆಗೆ, ಸ್ಥಳೀಯ ಬಜರಂಗದಳ ಘಟಕವೂ ಪ್ರಕರಣದ ತನಿಖೆಗೆ ಒತ್ತಾಯಿಸಿದ್ದು, ವಿಟ್ಲ ಸಿಐ ನಾಗರಾಜ್ ನೇತೃತ್ವದಲ್ಲಿ ತನಿಖೆ ಸಾಗಿದೆ.
'ಎಲ್ಲರನ್ನೂ ಬಿಟ್ಟು ಬಾ, ಇಲ್ಲವೇ...'! ಬಂಟ್ವಾಳದಲ್ಲಿ ಬಾಲಕಿ ಆತ್ಮಹತ್ಯೆ; ತಂದೆ ಹೇಳಿದ್ದೇನು? - ವಿಟ್ಲ ಪೊಲೀಸ್ ಠಾಣೆ ಸುದ್ದಿ
ಕನ್ಯಾನ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.
ಇದನ್ನೂ ಓದಿ:ಮದುವೆಗೆ ಕೇವಲ 24 ಗಂಟೆ ಬಾಕಿ.. ಯುವಕನ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ವಧು
ವಿವರ: ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ಪಂಜ ನಿವಾಸಿಯ ಪುತ್ರಿ ಮನೆಯಲ್ಲಿ ವಾಸವಾಗಿದ್ದರು. ನಿನ್ನೆ ಮನೆಮಂದಿ ಕೆಲಸಕ್ಕೆ ಹೋಗಿದ್ದಾಗ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವಕನೊಬ್ಬ ಬರುತ್ತಿದ್ದ. ನನ್ನ ಮಗಳನ್ನು ಭೇಟಿಯಾಗಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಬಳಿಕ ತಂದೆ-ತಾಯಿಯನ್ನು ಬಿಟ್ಟು ನನ್ನೊಂದಿಗೆ ಬಾ ಎಂದು ಪೀಡಿಸುತ್ತಿದ್ದ. ಮಗಳಿಗೆ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದನೆಗೆ ಒಳಗಾಗುವಂತೆ ಮಾಡಿದ್ದಾನೆ. ಹೀಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಾಲಕಿ ತಂದೆ ದೂರಿನಲ್ಲಿ ವಿವರಿಸಿದ್ದಾರೆ.