ಮಂಗಳೂರು: ಕೋವಿಡ್ ಸಂಕಷ್ಟ ಕಾಲದಲ್ಲಿ ಮತ್ತೆರಡು ಹಡಗಿನ ಮೂಲಕ ಆಮ್ಲಜನಕವನ್ನು ಮಂಗಳೂರಿನ ನವಮಂಗಳೂರಿಗೆ ತರಲಾಗಿದೆ.
ಸಮುದ್ರ ಮಾರ್ಗದ ಮೂಲಕ ಮತ್ತೆರಡು ಹಡಗಿನಲ್ಲಿ ನಗರಕ್ಕೆ 100 ಮೆಟ್ರಿಕ್ ಟನ್ ಆಮ್ಲಜನಕ - Oxygen arrived to mangalore
ಐಎನ್ಎಸ್ ಕೊಚ್ಚಿ ಹಾಗೂ ಇನ್ ಸ್ಟಾಬಾರ್ ಎಂಬ ಎರಡು ಹಡಗಿನ ಮೂಲಕ ತಲಾ 20 ಮೆಟ್ರಿಕ್ ಟನ್ ಆಮ್ಲಜನಕದ ಐದು ಕಂಟೈನರ್ ತರಲಾಗಿದೆ.
![ಸಮುದ್ರ ಮಾರ್ಗದ ಮೂಲಕ ಮತ್ತೆರಡು ಹಡಗಿನಲ್ಲಿ ನಗರಕ್ಕೆ 100 ಮೆಟ್ರಿಕ್ ಟನ್ ಆಮ್ಲಜನಕ 100 Metric Tonnes of Oxygen arrived to mangalore](https://etvbharatimages.akamaized.net/etvbharat/prod-images/768-512-07:05:37:1620740137-kn-mng-01-oxygen-script-ka10015-11052021190216-1105f-1620739936-1009.jpg)
ಐಎನ್ಎಸ್ ಕೊಚ್ಚಿ ಹಾಗೂ ಇನ್ ಸ್ಟಾಬಾರ್ ಎಂಬ ಎರಡು ಹಡಗಿನ ಮೂಲಕ ತಲಾ 20 ಮೆಟ್ರಿಕ್ ಟನ್ ಆಮ್ಲಜನಕದ ಐದು ಕಂಟೈನರ್ಗಳನ್ನು ಹೊತ್ತು ತರಲಾಗಿದೆ. ಐಎನ್ಎಸ್ ಕೊಚ್ಚಿ 20 ಮೆಟ್ರಿಕ್ ಟನ್ ಆಕ್ಸಿಜನ್ನ 3 ಕಂಟೈನರ್ ಬಂದಿದ್ದು, ಜೊತೆಗೆ ಒಂದು ಟನ್ ಗಾತ್ರದ 40 ಆಕ್ಸಿಜನ್ ಸಿಲಿಂಡರ್ಗಳು, 10ಲೀ. ಗಾತ್ರದ ಎರಡು ಹೈಫ್ಲೋ ಆಮ್ಲಜನಕ ಬಂದಿದೆ.
ಅದೇ ರೀತಿ ಇನ್ ಸ್ಟಾಬಾರ್ ಹಡಗಿನಲ್ಲಿ 20 ಮೆಟ್ರಿಕ್ ಟನ್ ಆಕ್ಸಿಜನ್ನ 2 ಕಂಟೈನರ್ಗಳು ಹಾಗೂ ಜೊತೆಗೆ ಒಂದು ಟನ್ ಗಾತ್ರದ 30 ಆಕ್ಸಿಜನ್ ಸಿಲಿಂಡರ್ಗಳು ಬಂದಿಳಿದಿದೆ. ಈ ಎರಡೂ ಹಡಗು ಕುವೈತ್ ನ ರುವೈಕ್ ಎಂಬ ಬಂದರಿನಿಂದ ಮೇ 6ರಂದು ಆಗಮಿಸಿದ್ದು, ಇಂದು ಎನ್ಎಂಪಿಟಿ ತಲುಪಿದೆ. ಇಲ್ಲಿಯವರೆಗೆ ಸಮುದ್ರ ಸೇತು ಕಾರ್ಯಾಚರಣೆ ಅಡಿ ಪ್ರಾಣವಾಯು ಆಮ್ಲಜನಕವನ್ನು ಹೊತ್ತೊಯ್ದ ನಾಲ್ಕು ಹಡಗುಗಳು ಭಾರತ ತಲುಪಿವೆ.