ಮಂಗಳೂರು:ಜನವರಿ 10ರಿಂದ ಹತ್ತು ದಿನಗಳ ಕಾಲ ಜರುಗಲಿರುವ ಕರಾವಳಿ ಉತ್ಸವವನ್ನು ನಟ,ನಿರ್ದೇಶಕ ರಿಷಬ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಈ ಕುರಿತು ಮಾಹಿತಿ ನೀಡಿದರು.
ಮಂಗಳೂರು: ಜನವರಿ 10ರಿಂದ ಹತ್ತು ದಿನಗಳ ಕಾಲ ಕರಾವಳಿ ಉತ್ಸವ - ನಟ-ನಿರ್ದೇಶಕ ರಿಷಬ್ ಶೆಟ್ಟಿ ಉದ್ಘಾಟನೆ
ಮಂಗಳೂರಿನಲ್ಲಿ ನಡೆಯಲಿರುವ ಕರಾವಳಿ ಉತ್ಸವು ಕರಾವಳಿ ಉತ್ಸವ ಮೈದಾನದಲ್ಲಿ ಜನವರಿ 10 ರಿಂದ 19ರ ತನಕ ನಡೆಯಲಿದೆ.

ಈ ಬಾರಿಯ ಕರಾವಳಿ ಉತ್ಸವವು ಕರಾವಳಿ ಉತ್ಸವ ಮೈದಾನದಲ್ಲಿ ಜನವರಿ 10 ರಿಂದ 19ರ ತನಕ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ನೆಹರೂ ಮೈದಾನದಿಂದ ಕರಾವಳಿ ಉತ್ಸವ ಮೈದಾನದವರೆಗೆ ಉದ್ಘಾಟನಾ ಮೆರವಣಿಗೆ ನಡೆಯಲಿದೆ. ಅದೇ ದಿನ ವಸ್ತು ಪ್ರದರ್ಶನದ ಉದ್ಘಾಟನೆಯೂ ನಡೆಯಲಿದೆ ಎಂದು ಸಚಿವರು ತಿಳಿಸಿದರು.
ಜ.19ರ ತನಕ ಕರಾವಳಿ ಉತ್ಸವ ಮೈದಾನ ಮತ್ತು ಕದ್ರಿ ಉದ್ಯಾನವನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜ.17, 18, 19ರಂದು ಪಣಂಬೂರು ಬೀಚ್‌ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಈ ಉತ್ಸವದಲ್ಲಿ ದೇಶ,ವಿದೇಶದ ಸ್ಪರ್ಧಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.