ಕಲಬುರಗಿ: ತಮ್ಮ ದಿಟ್ಟ ನುಡಿಗಳಿಂದಲೇ ಗುರುತಿಸಿಕೊಂಡಿದ್ದ ಮಾಜಿ ಜಿ. ಪಂ ಸದಸ್ಯ ದಲಿತ ಹೋರಾಟಗಾರ ಗುರುಶಾಂತ ಪಟ್ಟೇದಾರ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಕಲಬುರಗಿ ಜಿ.ಪಂ ಮಾಜಿ ಸದಸ್ಯ ಗುರುಶಾಂತಪ್ಪ ಕೊರೊನಾಗೆ ಬಲಿ - ಜಿ.ಪಂ ಮಾಜಿ ಸದಸ್ಯ ಸಾವು
ಗುರುಶಾಂತ ಪಟ್ಟೇದಾರ್(65) ಅವರು ಸೋಂಕು ಕಾಣಿಸಿಕೊಂಡ ಕೇವಲ 24 ಗಂಟೆಯಲ್ಲಿ ಮೃತಪಟ್ಟಿದ್ದಾರೆ. ನಿನ್ನೆ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರದೃಷ್ಟವಶಾತ್ ಇಂದು ಪಟ್ಟೇದಾರ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಇವರು 1996ರಲ್ಲಿ ಅಫಜಲಪೂರ ತಾಲೂಕಿನ ಗೊಬ್ಬೂರ ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಅನೇಕ ದಲಿತ ಹೋರಾಟಗಳಲ್ಲಿ ಭಾಗವಹಿಸಿದಲ್ಲದೇ, ಮುಂದಾಳತ್ವ ವಹಿಸಿದ್ದರು. ಸಹೋದರ, ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು, ಪತ್ನಿ ಸೇರಿದಂತೆ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.