ಕರ್ನಾಟಕ

karnataka

ETV Bharat / city

ಕಲಬುರಗಿಯಲ್ಲಿ ವರುಣನ ಅಬ್ಬರ: ನೀರಲ್ಲಿ ಕೊಚ್ಚಿ ಹೋಗ್ತಿದ್ದ ಯುವಕನ ರಕ್ಷಣೆ - Young man rescued who washed away in Kalburgi flood

ಕಲಬುರಗಿ ಜಿಲ್ಲೆಯ ಹೆಬ್ಬಾಳ ಗ್ರಾಮದ ಸೇತುವೆ ಬಳಿ ಹಳ್ಳದ ನೀರಿನ ರಭಸಕ್ಕೆ ಸಿಲುಕಿ ನೀರುಪಾಲಾಗುತ್ತಿದ್ದ ಯುವಕನನ್ನ ಮತ್ತೋರ್ವ ಯುವಕ ರಕ್ಷಿಸಿದ್ದಾನೆ.

Young man rescued who washed away in Kalburgi flood
ನೀರಲ್ಲಿ ಕೊಚ್ಚಿ ಹೋಗ್ತಿದ್ದ ಯುವಕನ ರಕ್ಷಣೆ

By

Published : Aug 31, 2021, 1:52 PM IST

ಕಲಬುರಗಿ:ಹರಿಯುವ ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಯುವಕನನ್ನ ಮತ್ತೋರ್ವ ಯುವಕ ರಕ್ಷಿಸಿರುವ ಘಟನೆ ಜಿಲ್ಲೆಯ ಕಾಳಗಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ.

ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯ ಹಲವಡೆ ನಿತಂತರವಾಗಿ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಚಿಂಚೋಳಿ, ಕಾಳಗಿ, ತಾಲೂಕಿನಲ್ಲಿ ವರುಣನ ಅಬ್ಬರಕ್ಕೆ ಬೆಣ್ಣೆತೋರಾ ಡ್ಯಾಂ ಬಹುತೇಖ ಭರ್ತಿಯಾಗಿದೆ. ಡ್ಯಾಂನಿಂದ ನದಿಗೆ ನೀರು ಹರಿ ಬಿಟ್ಟಿದ್ದರಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.

ನೀರಲ್ಲಿ ಕೊಚ್ಚಿ ಹೋಗ್ತಿದ್ದ ಯುವಕನ ರಕ್ಷಣೆ

ಇದನ್ನೂ ಓದಿ: ಬೀದರ್ ಜಿಲ್ಲೆಯಾದ್ಯಂತ ಭಾರಿ ಮಳೆ : ಸೇತುವೆ ಮುಳುಗಡೆ, ಸಂಚಾರ ಬಂದ್

ಕಾಳಗಿ ತಾಲೂಕಿನ ಹೆಬ್ಬಾಳ ಗ್ರಾಮದ ಸೇತುವೆ ಬಳಿ ಹಳ್ಳದ ನೀರಿನ ರಭಸಕ್ಕೆ ಸಿಲುಕಿ ನೀರುಪಾಲಾಗುತ್ತಿದ್ದ ಕಾಶಿನಾಥ್ ಎಂಬ ಯುವಕನನ್ನ ಇನ್ನೊಬ್ಬ ಯುವಕ ನೀರಿಗೆ ಧುಮುಕಿ ರಕ್ಷಣೆ ಮಾಡಿದ್ದಾನೆ‌. ನಿನ್ನೆ ಸಂಜೆ ಕಾಶಿನಾಥ ನೀರಿನಲ್ಲಿ ಈಜಲು ಹೋಗಿದ್ದಾಗ ಘಟನೆ ನಡೆದಿದೆ ಎನ್ನಲಾಗ್ತಿದೆ.

ABOUT THE AUTHOR

...view details