ಕಲಬುರಗಿ:ತಲೆ ಮೇಲೆ ಕಲ್ಲನ್ನು ಎತ್ತಿಹಾಕಿ ಯುವಕನನ್ನು ಭೀಕರವಾಗಿ ಹತ್ಯೆಮಾಡಿರುವ ಘಟನೆ ಕಮಲಾಪುರ ತಾಲೂಕಿನ ಮಹಾಗಾಂವ್ ಪುನರ ವಸತಿ ಕೇಂದ್ರದಲ್ಲಿ ನಡೆದಿದೆ. ಬಸವನಗರ ನಿವಾಸಿ ಮಂಜುನಾಥ ಕಟ್ಟಿಮನಿ (22) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ.
ಮಂಜುನಾಥ ನಾಲ್ಕು ದಿನದ ಹಿಂದೆ ಕಾಣೆಯಾಗಿದ್ದನು. ಈ ಕುರಿತು ಕುಟುಂಬಸ್ಥರು ಆರ್.ಜಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಮಂಜುನಾಥ ಮಹಾಗಾಂವ್ನ ಪುನರ ವಸತಿ ಶಾಲೆಯ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿರುವುದು ತಿಳಿದುಬಂದಿದೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಂಜುನಾಥ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.