ಕರ್ನಾಟಕ

karnataka

ETV Bharat / city

ವಿವಾಹೇತರ ಸಂಬಂಧಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ.. - ಕಲಬುರಗಿ ಅಪರಾಧ ಸುದ್ದಿ

ಕಲಬುರಗಿಯ ಸೇಡಂ ತಾಲೂಕಿನಲ್ಲಿ ವಿವಾಹೇತರ ಸಂಬಂಧಕ್ಕೆ ಅಡ್ಡಿ ಪಡಿಸಿದ್ದ ಪತಿಯನ್ನು ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಕೊಂದಿರುವ ಘಟನೆ ನಡೆದಿದೆ.

wife-kills-husband-for-extramarital-affairs
ವಿವಾಹೇತರ ಸಂಬಂಧಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ..

By

Published : Oct 22, 2021, 1:53 AM IST

ಕಲಬುರಗಿ : ವಿವಾಹೇತರ ಸಂಬಂಧಕ್ಕೆ ಅಡ್ಡಿ ಬಂದ ಕಾರಣ ಗಂಡನನ್ನೇ ಹೆಂಡತಿ ಹಾಗೂ ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿ, ಸಾಧಾರಣ ಸಾವು ಎಂದು ಬಿಂಬಿಸಲು ಯತ್ನಿಸಿರುವ ಘಟನೆ ಸೇಡಂ ತಾಲೂಕಿನ ಈರನಾಪಲ್ಲಿಯಲ್ಲಿ ಜರುಗಿದೆ.

ಎರಡು ತಿಂಗಳ ಹಿಂದೆ ಗ್ರಾಮದ ರಾಜಪ್ಪ (35) ಎಂಬಾತನನ್ನು ಆತನ ಹೆಂಡತಿ ಅನುಸೂಯಾ ತನ್ನ ಪ್ರಿಯಕರ ತೆಲಂಗಾಣದ ಕೊಡಂಗಲ ತಾಲೂಕಿನ ಅಂತಾವರಂ ಗ್ರಾಮದ ನಿವಾಸಿ ಶ್ರೀಶೈಲಂ ಮಲ್ಲಪ್ಪ ಕುರುವಾ ಎಂಬಾತನ ಜೊತೆಗೂಡಿ ಕೊಲೆ ಮಾಡಿದ್ದಳು.

ಮೊದಲಿಗೆ ಸೇಂಧಿಯಲ್ಲಿ ವಿಷದ ಮಾತ್ರೆ ಹಾಕಿ ಕೊಲೆ ಮಾಡಲು ಯತ್ನಿಸಿ, ನಂತರ ಕತ್ತು ಹಿಸುಕಿ ಆತನನ್ನು ಕೊಲ್ಲಲಾಗಿತ್ತು. ಈ ಕೃತ್ಯಕ್ಕೆ ಶ್ರೀಶೈಲಂ ಮಲ್ಲಪ್ಪ ಕುರುವಾ ಸಂಬಂಧಿ ಅಶೋಕ ಕುರುವಾ ಎಂಬಾತನ ಸಹಾಯವನ್ನು ಪಡೆದುಕೊಳ್ಳಲಾಗಿತ್ತು.

ರಾಜಪ್ಪ ಮೃತಪಟ್ಟ ನಂತರ ಸಾಧಾರಣ ಸಾವೆಂದು ಬಿಂಬಿಸಲು ಮೃತದೇಹ ಮನೆಯ ಬಾಗಿಲಲ್ಲಿ ಮಲಗಿಸಿ, ಕುಡಿದ ಮತ್ತಿನಲ್ಲಿ ರಾಜಪ್ಪ ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರನ್ನು ನಂಬಿಸಿದ್ದು ಮಾತ್ರವಲ್ಲದೇ, ಅಂತ್ಯಸಂಸ್ಕಾರವನ್ನೂ ನೆರವೇರಿಸಲಾಗಿತ್ತು.

ಇತ್ತೀಚೆಗೆ ಎರಡು ತಿಂಗಳ ನಂತರ ಆಕೆಯ ಪ್ರಿಯಕರ ಶ್ರೀಶೈಲಂ ಮಲ್ಲಪ್ಪ ಕುರುವಾ ಈರನಾಪಲ್ಲಿಗೆ ಆಗಮಿಸಿದಾಗ, ಅನುಮಾನಗೊಂಡ ಗ್ರಾಮಸ್ಥರು ವಿಚಾರಿಸಿದ್ದಾರೆ. ಆಗ ಸತ್ಯ ಹೊರಬಿದ್ದಿದೆ.

ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಅನುಸೂಯಾ ಹಾಗೂ ಶ್ರೀಶೈಲಂನನ್ನು ಜೈಲಿಗಟ್ಟಲಾಗಿದೆ. ಕೊಲೆಗೆ ಸಹಕರಿಸಿದ ಅಶೋಕ ಕುರುವಾ ಪತ್ತೆಗಾಗಿ ಬಲೆ ಬೀಸಲಾಗಿದ್ದು, ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಚಿಕ್ಕಮಗಳೂರು: ಸೆಲ್ಫಿ ತೆಗೆಯಲು ಹೋಗಿ ಜಲಪಾತದ ಪ್ರಪಾತಕ್ಕೆ ಬಿದ್ದ ಯುವಕ

ABOUT THE AUTHOR

...view details