ಕಲಬುರಗಿ:ಎರಡು ತಿಂಗಳ ಹಿಂದೆ ನಡೆದ ವ್ಯಕ್ತಿಯೊಬ್ಬರ ಕೊಲೆ ಕೇಸನ್ನು ಪೊಲೀಸರು ಭೇದಿಸಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದನೆಂದು ಪತ್ನಿಯೇ ಪತಿಯನ್ನು ಕೊಲೆ ಮಾಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪತ್ನಿ ಮಹಾದೇವಿ, ಸಂತೋಷ್ ಬಿರಾದಾರ್, ಸತೀಶ್ರನ್ನು ಬಂಧಿಸಲಾಗಿದೆ.
ಘಟನೆ ಏನು?:ಮೇ 15 ರಂದು ಜಿಲ್ಲೆಯ ಅಫಜಲಪುರ ತಾಲೂಕಿನ ಕೇಶ್ವಾಪುರ ಗ್ರಾಮದ ಬಳಿ ಜಮೀನುವೊಂದರಲ್ಲಿ ಗುರುಪ್ಪ ಎಂಬಾತನ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ, ಪತ್ನಿಯ ವಿರುದ್ಧವೇ ಕುಟುಂಬಸ್ಥರು ಶಂಕಿಸಿದ್ದರು. ಆದರೆ, ಈ ಬಗ್ಗೆ ಯಾವುದೇ ಸುಳಿವು ಇರಲಿಲ್ಲ.
ಕೊಲೆಯಾದ ಗುರುಪ್ಪನ ಸ್ನೇಹಿತ ಸಂತೋಷ್ ಎಂಬಾತನ ಆರೋಪಿ ಮಹಾದೇವಿ ಅಕ್ರಮ ಸಂಬಂಧ ಹೊಂದಿದ್ದಳು. ಇದನ್ನು ಪ್ರಶ್ನಿಸುತ್ತಿದ್ದ ಪತಿಯೊಂದಿಗೆ ಮಹಾದೇವಿ ಜಗಳವಾಡುತ್ತಿದ್ದಳು. ಇದರಿಂದ ಬೇಸತ್ತ ಮಹಾದೇವಿ ಗುರುಪ್ಪನನ್ನು ಮುಗಿಸಲು ಪ್ರಿಯಕರ ಸಂತೋಷರರ ಜೊತೆಗೂಡಿ ಸ್ಕೆಚ್ ಹಾಕಿದ್ದಳು.
ಅದರಂತೆ ಮೇ 15 ರಂದು ಗುರುಪ್ಪನನ್ನು ಜೇವರ್ಗಿಯಿಂದ ಫರಹತಾಬಾದ್ ಕಡೆಗೆ ಕರೆತಂದು ಮಾರಕಾಸ್ತ್ರಗಳಿಂದ ಕೊಲೆ ಮಾಡಿ, ನಂತರ ಶವವನ್ನು ಅಫಜಲಪುರ ತಾಲೂಕಿನ ಕೇಶ್ವಾಪುರ ಗ್ರಾಮದ ಜಮೀನೊಂದರಲ್ಲಿ ಬಿಸಾಡಲಾಗಿತ್ತು. ಮೇ 15 ರಂದು ಶವ ಪೊಲೀಸರು ಶವ ಪತ್ತೆ ಮಾಡಿದ್ದರು. ಆದರೆ, ಅದು ಗುರುಪ್ಪ ಎಂದು ಗುರುತು ಸಿಕ್ಕಿರಲಿಲ್ಲ. ಈ ಬಗ್ಗೆ ದೂರು ದಾಖಲಾಗದಿದ್ದಕ್ಕಾಗಿ ಪೊಲೀಸರೇ ಶವಸಂಸ್ಕಾರ ಮಾಡಿದ್ದರು.
ನಂತರ ಜೂನ್ 5 ರಂದು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಗುರುಪ್ಪನ ಕುಟುಂಬಸ್ಥರು ಕೇಸ್ ದಾಖಲಿಸಿದ್ದರು. ಈ ಬಗ್ಗೆ ಅಫಜಲಪುರ ಠಾಣೆ ಪೊಲೀಸರು ಕೇಶ್ವಾಪುರ ಬಳಿ ಶವ ಪತ್ತೆಯಾಗಿದ್ದರ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಕುಟುಂಬಸ್ಥರಿಗೆ ಶವದ ಫೋಟೊ ತೋರಿಸಿದಾಗ ಇದು ಗುರಪ್ಪ ಎಂದು ಗುರುತಿಸಿದ್ದಾರೆ. ಬಳಿಕ ಪತ್ನಿ ಮಹಾದೇವಿಯೇ ಕೊಲೆ ಮಾಡಿಸಿದ್ದಾಳೆ ಎಂದು ದೂರು ನೀಡಿದ್ದರು. ಬಳಿಕ ಮಹಾದೇವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಂತೋಷ್ ಮತ್ತು ಸತೀಶ್ ಜೊತೆ ಸೇರಿಕೊಂಡು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಓದಿ:ಮಂಗಳೂರಿನಲ್ಲಿ ಬಾಲಕಿ ಮೇಲೆ ಮಾನಭಂಗಕ್ಕೆ ಯತ್ನ.. ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲು