ಕಲಬುರಗಿ: ಹೆಂಡತಿ ಜೈಲರ್, ಗಂಡ ಅದೇ ಜೈಲಿನಲ್ಲಿ ಖೈದಿ, ಇದು ಕೇಳೋದಕ್ಕೆ ವಿಪರ್ಯಾಸ ಅನಿಸಿದರು ಸತ್ಯ. ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಜೈಲು ಪಾಲಾದ ಡಿಎಸ್ಪಿ ವೈಜನಾಥ ರೇವೂರನನ್ನ ಇಂದು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ವೈಜನಾಥ ರೇವೂರ ಅವರ ಸಿಐಡಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಕಾರಾಗೃಹಕ್ಕೆ ಇಂದು ಶಿಫ್ಟ್ ಮಾಡಲಾಗಿದೆ. ವೈಜನಾಥ ಅವರ ಪತ್ನಿಯೇ ಕಾರಾಗೃಹದ ಜೈಲರ್ ಆಗಿದ್ದಾರೆ.
ಪಿಎಸ್ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಜೊತೆಗೆ ನೇರ ಸಂಪರ್ಕಹೊಂದಿದ್ದ ಕೆಎಸ್‌ಆರ್‌ಪಿ ಅಸ್ಸಿಸ್ಟೆಂಟ್ ಕಮಾಂಡಂಟ್(ಡಿಎಸ್ಪಿ) ವೈಜನಾಥ ರೇವೂರ, ಪರೀಕ್ಷಾರ್ಥಿ ಅಭ್ಯರ್ಥಿಗಳು ಹಾಗೂ ಆರ್.ಡಿ.ಪಾಟೀಲ್ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಆರ್.ಡಿ.ಪಾಟೀಲ್‌ನನ್ನ ಪರಿಚಯಿಸಿ ಅಕ್ರಮಕ್ಕಾಗಿ ವ್ಯಾಪಾರ ಕುದಿರಿಸಿದ್ದಾನೆಂಬ ಗಂಭೀರ ಆರೋಪದ ಹಿನ್ನಲೆ ಸಿಐಡಿ ಅಧಿಕಾರಿಗಳು ವೈಜನಾಥರನ್ನು ಮೇ. 06 ರಂದು ಬಂಧಿಸಿದ್ದರು. ನಂತರ ನ್ಯಾಯಾಲಯದ ಅನುಮತಿ ಮೇರೆಗೆ 7 ದಿನಗಳ ಕಾಲ ವೈಜನಾಥ ರೇವೂರನನ್ನು ಕಸ್ಟಡಿಗೆ ಪಡೆದು ಸುದೀರ್ಘ ವಿಚಾರಣೆ ನಡೆಸಿದ ಸಿಐಡಿ ಇಂದು ಜೈಲಿಗೆ ಶಿಫ್ಟ್ ಮಾಡಿದ್ದಾರೆ.
ಪಿಎಸ್ಐ ಅಕ್ರಮದಲ್ಲಿ ಡಿಎಸ್ಪಿ ವೈಜನಾಥ ಜೈಲಿಗೆ ಶಿಫ್ಟ್ ಉದನೂರ ಕ್ರಾಸ್ ಬಳಿ ಅಕ್ರಮದ ಪ್ಲಾನ್: ವೈಜನಾಥ ರೇವೂರ ಅವರನ್ನು ಸಾಯಂಕಾಲ 6 ಗಂಟೆ ಸುಮಾರಿಗೆ ಜೈಲಿಗೆ ಕಳುಹಿಸಲಾಗಿದ್ದು, ಇದಕ್ಕೂ ಮುನ್ನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಥಳ ಮಹಜರ್ ಮಾಡಲಾಯಿತು. ಉದನೂರ ಕ್ರಾಸ್, ಹೈಕೋರ್ಟ್ ಬಳಿಯ ಆರ್.ಡಿ.ಪಾಟೀಲ್ ಮನೆ ಹತ್ತಿರ ಸ್ಥಳ ಮಹಜರ ಮಾಡಲಾಯಿತು.
ಇವೆರಡು ಸ್ಥಳದಲ್ಲಿ ಕಿಂಗ್‌ಪಿನ್ ಆರ್‌ಡಿಪಿ ಹಾಗೂ ವೈಜನಾಥ ಭೇಟಿ ಆಗಿದ್ದರಂತೆ. ಪರೀಕ್ಷೆಗೂ ಮುಂಚೆ ಉದನೂರ ಕ್ರಾಸ್ ಬಳಿ ಸೇರಿ ಪ್ಲಾನ್ ತಯಾರಿ ಮಾಡಿ ಅದರಂತೆ ಅಕ್ರಮ ನಡೆಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.
ವೈಜನಾಥ ರೇವೂರ ಅವರ ಪತ್ನಿ ಕಲಬುರಗಿ ಕೇಂದ್ರ ಕಾರಾಗೃಹದ ಜೈಲರ್ ಆಗಿದ್ದು, ಇದೆ ಜೈಲಿಗೆ ಪತಿಯನ್ನು ಶಿಫ್ಟ್ ಮಾಡಿದ್ದು ಅವರಿಗೆ ಮುಜುಗರವುಂಟು ಮಾಡುವಂತಾಗಿದೆ. ಆದರೆ, ಇಲ್ಲಿವರೆಗೆ ಪತಿಯನ್ನು ವಹಿಸಿಕೊಂಡು ಬರುವುದಾಗಲಿ ಅಥವಾ ತನಿಖೆಗೆ ಅಡ್ಡಿ ಪಡಿಸುವುದಾಗಲಿ ಸೇರಿದಂತೆ ಯಾವುದೇ ರೀತಿಯಲ್ಲಿ ಅಡಿ- ತಡೆಗಳನ್ನು ವೈಜನಾಥ ಅವರ ಪತ್ನಿ ಮಾಡಿಲ್ಲ ಅಂತ ಸಿಐಡಿ ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ:ಕೋವಿಡ್ನಿಂದ ಮಗ ಸಾವು ; ಸೊಸೆಗೆ ಬೇರೊಂದು ಮದುವೆ ಮಾಡಿಸಿ, ಲಕ್ಷಾಂತರ ರೂ.ಮೌಲ್ಯದ ಬಂಗಲೆ ಉಡುಗೊರೆ ನೀಡಿದ ಅತ್ತೆ!