ಕರ್ನಾಟಕ

karnataka

ETV Bharat / city

ವಾರದ ಮೂರು ದಿನ ಕಲಬುರಗಿ ಸಂಪೂರ್ಣ ಲಾಕ್​ : ಜಿಲ್ಲಾಧಿಕಾರಿ ಜೋತ್ಸ್ನಾ - ಲಾಕ್​ಡೌನ್​​

ಪ್ರಧಾನಿ ಮೋದಿಯವರ ಜೊತೆ ವಿಡಿಯೋ ಕಾನ್ಪರೆನ್ಸ್ ವಿಚಾರವಾಗಿ ಮಾತನಾಡಿದ ಜಿಲ್ಲಾಧಿಕಾರಿಗಳು, ಗ್ರಾಮೀಣ ಭಾಗದಲ್ಲಿ ಕೊರೊನಾ ನಿಯಂತ್ರಿಸಲು ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ವಾರದಲ್ಲಿ ಮೂರು ದಿನಗಳ ಕಾಲ ಜಿಲ್ಲೆಯನ್ನು ಸಂಪೂರ್ಣ ಲಾಕ್​ಡೌನ್​ ಮಾಡುವುದಾಗಿ ಘೋಷಿಸಿದ್ದಾರೆ.

weekly-three-days-lockdown-in-kalaburagi-district
ಡಿಸಿ ವಿವಿ ಜೋತ್ಸ್ನಾ

By

Published : May 18, 2021, 3:48 PM IST

ಕಲಬುರಗಿ :ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ವಾರದ ಮೂರು ದಿನಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಕೊರೊನಾ ಸೋಂಕು ಕಡಿಮೆ ಆಗುವವರೆಗೆ ಪ್ರತಿ ಗುರುವಾರ, ಶುಕ್ರವಾರ, ಶನಿವಾರ ಮೂರುದಿನ ಕಂಪ್ಲೀಟ್ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ.

ತರಕಾರಿ, ದಿನಸಿ ಖರೀದಿಗೂ ಕೂಡ ಅವಕಾಶ ಇರುವುದಿಲ್ಲ. ಹೋಟೆಲ್ ಪಾರ್ಸಲ್​ಗೆ ಮಾತ್ರ ಅವಕಾಶ ಇರುತ್ತದೆ ಎಂದು ಡಿಸಿ ವಿ ವಿ ಜೋತ್ಸ್ನಾ ಮಾಹಿತಿ ತಿಳಿಸಿದರು.

ವಾರದ ಮೂರು ದಿನ ಕಲಬುರಗಿ ಸಂಪೂರ್ಣ ಲಾಕ್..

ಪ್ರಧಾನಿ ಮೋದಿಯವರ ಜೊತೆ ವಿಡಿಯೋ ಕಾನ್ಪರೆನ್ಸ್ ವಿಚಾರವಾಗಿ ಮಾತನಾಡಿದ ಜಿಲ್ಲಾಧಿಕಾರಿಗಳು, ಗ್ರಾಮೀಣ ಭಾಗದಲ್ಲಿ ಕೊರೊನಾ ನಿಯಂತ್ರಣ ಮಾಡಲು ಸೂಚನೆ ನೀಡಿದ್ದಾರೆ.

ಹೀಗಾಗಿ, ಹೋಮ್ ಐಸೋಲೇಷನ್​ನಲ್ಲಿ ಇರುವ ಸೋಂಕಿತರನ್ನು ಕೋವಿಡ್ ಸೆಂಟರ್​​ಗೆ ದಾಖಲು ಮಾಡಲಾಗುವುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details