ಕರ್ನಾಟಕ

karnataka

ಕಲಬುರಗಿ:  ಲಂಚ ಪಡೆಯುವಾಗ ಎಸಿಬಿ ಬಲೆಗೆ‌ ಬಿದ್ದ ಗ್ರಾಮ ಲೆಕ್ಕಿಗ

By

Published : Jun 8, 2022, 10:47 AM IST

ಅಫಜಲಪುರ ತಹಶೀಲ್ದಾರ್​ ಕಚೇರಿ ಆವರಣದಲ್ಲಿ ಗ್ರಾಮ ಲೆಕ್ಕಿಗ ಐದು ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದಾರೆ.

village accountant who fell into the ACB trap when receiving bribes in Kalaburagi
ಎಸಿಬಿ ಬಲೆಗೆ‌ ಬಿದ್ದ ಗ್ರಾಮ ಲೆಕ್ಕಿಗ

ಕಲಬುರಗಿ: ಜಮೀನು ಮ್ಯುಟೇಷನ್​​​​​​​ಗಾಗಿ ಫೋನ್ ಪೇ ಮೂಲಕ ಲಂಚ ಪಡೆಯುವಾಗ ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ ಬಿದ್ದಿದ್ದಾನೆ. ಅಫಜಲಪುರ ತಾಲೂಕಿನ ಹಿರೇಜೇವರ್ಗಿ ಗ್ರಾಮ ಲೆಕ್ಕಿಗ ಮಹಾಬಲೇಶ್ವರ ಕುಂಬಾರ ಬಲೆಗೆ ಬಿದ್ದ ಅಧಿಕಾರಿ.‌ ಐದು ಸಾವಿರ ರೂ. ಫೋನ್ ಪೇ ಮೂಲಕ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಸಿಕ್ಕಿ ಹಾಕಿಕೊಂಡಿದ್ದಾರೆ.

ಶರಣಬಸಪ್ಪ ಎನ್ನುವರಿಂದ ಜಮೀನು ಮ್ಯುಟೇಷನ್​​​​​​​ಗಾಗಿ ಲಂಚದ ಬೇಡಿಕೆ ಇಟ್ಟು, ಅಫಜಲಪುರ ತಹಶೀಲ್ದಾರ್​​ ಕಚೇರಿ ಆವರಣದಲ್ಲಿ ಐದು ಸಾವಿರ ರೂಪಾಯಿ ಹಣ ಪಡೆಯುವಾಗ ಎಸಿಬಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಕೆಲಸವಾದ ನಂತರ ಇನ್ನಷ್ಟು ಹಣ ನೀಡುವಂತೆ ಹೇಳಿದ್ದನಂತೆ. ಸದ್ಯ ಎಸಿಬಿ ಅಧಿಕಾರಿಗಳು ಗ್ರಾಮ ಲೆಕ್ಕಿಗ ಮಹಾಬಲೇಶ್ವರ ಕುಂಬಾರನನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ:ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹ ಬೆಳೆಸಿ ವಂಚನೆ: ಆರೋಪಿ ಅರೆಸ್ಟ್​​

ABOUT THE AUTHOR

...view details