ಕರ್ನಾಟಕ

karnataka

ETV Bharat / city

ಖಾತೆ ಹಂಚಿಕೆಯಲ್ಲಿ ನನ್ನ ಪಾತ್ರವಿಲ್ಲ: ಬಿ.ವೈ. ವಿಜಯೇಂದ್ರ - BJP state vice president Vijayendra reaction

ಯಡಿಯೂರಪ್ಪನವರು ನಾಲ್ಕು ದಶಕಗಳ ಹೋರಾಟದ ಮೂಲಕ ಸಿಎಂ ಆದವರು. ಅಸಮಾಧಾನಗೊಂಡವರೊಂದಿಗೆ ಸಿಎಂ ಮಾತನಾಡಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ವಿಜಯೇಂದ್ರ
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ವಿಜಯೇಂದ್ರ

By

Published : Jan 21, 2021, 3:18 PM IST

ಕಲಬುರಗಿ: ಖಾತೆ ಬದಲಾವಣೆಯಿಂದ ಉಂಟಾದ ಅಸಮಾಧಾನ ಸದ್ಯದಲ್ಲೇ ಶಮನ ಆಗುತ್ತದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಎಲ್ಲವನ್ನೂ ಪರಿಹರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೇಳಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ವಿಜಯೇಂದ್ರ

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಅಸಮಾಧಾನಿತರೊಂದಿಗೆ ಸಿಎಂ ಮಾತನಾಡಿ ಸಮಸ್ಯೆ ಬಗೆಹರಿಸಲಿದ್ದಾರೆ. ಖಾತೆ ಹಂಚಿಕೆಯಲ್ಲಿ ವಿಜಯೇಂದ್ರ ಪಾತ್ರವಿದೆ ಎನ್ನುವ ಆರೋಪಗಳೆಲ್ಲ ಶುದ್ಧ ಸುಳ್ಳು, ಯಡಿಯೂರಪ್ಪನವರು ನಾಲ್ಕು ದಶಕಗಳ ಹೋರಾಟದ ಮೂಲಕ ಸಿಎಂ ಆದವರು. ಡಿಸಿಎಂ ಆಗಿ, ಸಿಎಂ ಆಗಿ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. ಬಿ.ಎಸ್. ಯಡಿಯೂರಪ್ಪನವರಿಗೆ ಯಾರ ಹಸ್ತಕ್ಷೇಪದ ಅಗತ್ಯವೂ ಬೀಳುವುದಿಲ್ಲ, ಅಲ್ಲದೇ ನನ್ನ ಹಸ್ತಕ್ಷೇಪವಂತೂ ಇಲ್ಲವೇ ಇಲ್ಲ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಪ್ರತಿಭಟನಾ ರ‍್ಯಾಲಿ ವಿರುದ್ಧ ಮಾತನಾಡಿದ ವಿಜಯೇಂದ್ರ, ರೈತರ ಪರವಾಗಿ ಮೊಸಳೆ ಕಣ್ಣೀರು ಹಾಕಿದರೆ ಲಾಭ ತರುವುದಿಲ್ಲ, ಬಿಎಸ್​ವೈ ರೈತ ಮುಖಂಡರು, ರೈತರ ಪರವಾಗಿ ನಿಲ್ಲುತ್ತಾರೆ ಅನ್ನೋದು ರಾಜ್ಯದ ಪ್ರತಿಯೊಬ್ಬ ರೈತರಿಗೆ ಗೊತ್ತಿದೆ ಎಂದು ಟಾಂಗ್ ನೀಡಿದರು.

ABOUT THE AUTHOR

...view details