ಕರ್ನಾಟಕ

karnataka

ETV Bharat / city

ಸಂತ್ರಸ್ತ ಪೋಷಕರಿಗೆ ಸಾಂತ್ವನ ಹೇಳಿದ ಸಂಸದ ಡಾ. ಉಮೇಶ್​ ಜಾಧವ್ - kalburgi district chincholli taluk yakapur village rape case

ಚಿಂಚೋಳಿ ತಾಲೂಕಿನ ಯಾಕಾಪೂರ ಗ್ರಾಮಕ್ಕೆ ಸಂಸದ ಡಾ. ಉಮೇಶ್​ ಜಾಧವ್​ ಭೇಟಿ ನೀಡಿ ಅತ್ಯಾಚಾರ ಬಾಲಕಿಯ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಯಾಕಾಪೂರ ಗ್ರಾಮಕ್ಕೆ ಸಂಸದ ಡಾ. ಉಮೇಶ್​ ಜಾಧವ್​ ಭೇಟಿ
ಯಾಕಾಪೂರ ಗ್ರಾಮಕ್ಕೆ ಸಂಸದ ಡಾ. ಉಮೇಶ್​ ಜಾಧವ್​ ಭೇಟಿ

By

Published : Dec 7, 2019, 1:27 PM IST

ಕಲಬುರಗಿ: ಚಿಂಚೋಳಿ ತಾಲೂಕಿನ ಯಾಕಾಪೂರ ಗ್ರಾಮಕ್ಕೆ ಸಂಸದ ಡಾ. ಉಮೇಶ್​ ಜಾಧವ್​ ಭೇಟಿ ನೀಡಿದ್ದು,ಅತ್ಯಾಚಾರ ನಡೆದ ಬಾಲಕಿಯ ಪೋಷಕರಿಗೆ ಸಾಂತ್ವನ ಹೇಳಿದರು.

ಯಾಕಾಪೂರ ಗ್ರಾಮಕ್ಕೆ ಸಂಸದ ಡಾ. ಉಮೇಶ್​ ಜಾಧವ್​ ಭೇಟಿ

ದೆಹಲಿ ಪ್ರವಾಸ ಮುಗಿದ ಬಳಿಕ ತಡರಾತ್ರಿ ಯಾಕಾಪೂರ ಗ್ರಾಮಕ್ಕೆ ಭೇಟಿ ನೀಡಿದ ಡಾ. ಉಮೇಶ್​ ಜಾಧವ್, ಅತ್ಯಾಚಾರ ನಡೆದ ಬಾಲಕಿಯ ಸಂತ್ರಸ್ತ ಪೋಷಕರಿಗೆ ಸಾಂತ್ವನ ಹೇಳಿದರು. ತಪ್ಪಿತಸ್ಥರಿಗೆ ಶಿಕ್ಷೆ ಸಿಗುವಂತೆ ಮಾಡಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.

ಬಳಿಕ ಮಾತನಾಡಿದ ಅವರು, ಹೈದರಾಬಾದ್​ ಅತ್ಯಾಚಾರ ಆರೋಪಿಗಳ ಶೂಟೌಟ್ ಪೊಲೀಸರ ಆತ್ಮರಕ್ಷಣೆಗಾಗಿ ನಡೆದಿದ್ದು, ಎಲ್ಲಿಯೂ ಕಾನೂನು ಉಲ್ಲಂಘನೆ ನಡೆದಿಲ್ಲ, ಇಲ್ಲಿನ ಆರೋಪಿ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನ್ಯಾಯಾಲಯದ ಮೂಲಕ ಕಠಿಣ ಶಿಕ್ಷೆ ಸಿಗಲಿದೆ ಎಂದು ಹೇಳಿದರು.

ಯಾಕಾಪೂರ ಗ್ರಾಮದ ಬುದ್ದಿಮಾಂದ್ಯ 8 ವರ್ಷದ ಬಾಲಕಿಗೆ ತಿಂಡಿ ಕೊಡಿಸುವುದಾಗಿ ಆರೋಪಿ ಯಲ್ಲಪ್ಪ ಕರೆದು, ಅತ್ಯಾಚಾರಗೈದು ಬಳಿಕ ಕುತ್ತಿಗೆ ಹಿಸುಕಿ ಕೊಲೆಗೈದಿದ್ದ, ಸದ್ಯ ಆತನನ್ನು ಸುಲೇಪೇಟ್ ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ‌.

For All Latest Updates

TAGGED:

ABOUT THE AUTHOR

...view details