ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಬಗ್ಗೆ ಸುರೇಶ್ ಅಂಗಡಿ ಜತೆ ಚರ್ಚಿಸಿದ ಜಾಧವ್ - ಸಂಸದ ಉಮೇಶ್ ಜಾಧವ್
ರೈಲ್ವೆ ವಿಭಾಗೀಯ ಕಚೇರಿ ಶೀಘ್ರ ಪ್ರಾರಂಭಿಸುವ ಕುರಿತಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಜೊತೆ ಚರ್ಚೆ ನಡೆಸಿರುವುದಾಗಿ ಸಂಸದ ಉಮೇಶ್ ಜಾಧವ್ ಹೇಳಿದ್ದಾರೆ.

ಕಲಬುರಗಿ: ರೈಲ್ವೆ ವಿಭಾಗೀಯ ಕಚೇರಿ ಶೀಘ್ರ ಪ್ರಾರಂಭಿಸುವ ಕುರಿತಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಜೊತೆ ಚರ್ಚೆ ನಡೆಸಿರುವುದಾಗಿ ಸಂಸದ ಉಮೇಶ್ ಜಾಧವ್ ಹೇಳಿದ್ದಾರೆ.
ದೆಹಲಿಯ ಸಚಿವರ ಕಚೇರಿಗೆ ಭೇಟಿ ನೀಡಿದ ಪೋಟೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಅವರು, ಕಲಬುರಗಿ ವಿಭಾಗೀಯ ಕಚೇರಿ ಸ್ಥಾಪನೆಗೆ ಈಗಾಗಲೇ ಅನುಮತಿ ದೊರೆತ್ತಿದ್ದು, ಕೊಡಲೇ ಆರಂಭಿಸುವ ಕುರಿತು ಸಚಿವ ಸುರೇಶ್ ಅಂಗಡಿ ಜೊತೆ ಚರ್ಚೆ ನಡೆಸಿರುವುದಾಗಿ ಬರೆದುಕೊಂಡಿದ್ದಾರೆ. ಈ ವೇಳೆ ಮುಂದಿನ ಬಜೆಟ್ನಲ್ಲಿ ಕಲಬುರಗಿಗೆ ಪ್ರಮುಖ ಯೋಜನೆಗಳನ್ನು ಘೋಷಿಸುವುದಾಗಿ ಸುರೇಶ್ ಅಂಗಡಿ ಭರವಸೆ ನೀಡಿದ್ದಾರೆ ಎಂದು ಜಾಧವ್ ಬರೆದುಕೊಂಡಿದ್ದಾರೆ.