ಕಲಬುರಗಿ: ಬೆಳಗ್ಗೆ ಎಸ್ಪಿ ಇಶಾ ಪಂತ್ ಮನೆಯಲ್ಲಿ ಎರಡು ಹಾವುಗಳು ಕಾಣಿಸಿಕೊಂಡಿವೆ. ಪೊಲೀಸ್ ಭವನ ಮುಂಭಾಗದಲ್ಲಿರುವ ಮನೆಯ ಸ್ವಿಮ್ಮಿಂಗ್ ಫೂಲ್ ಬಳಿಯ ಕೊಣೆಯಲ್ಲಿ ಹಾವುಗಳಿದ್ದವು. ತಕ್ಷಣ ಎಸ್ಪಿ, ತಮ್ಮ ಸಹಾಯಕ ಸಿಬ್ಬಂದಿ ಮುಖಾಂತರ ಸ್ನೇಕ್ ಮಾಸ್ಟರ್ ಪ್ರಶಾಂತ್ ಅವರನ್ನು ಕರೆಸಿ ರಕ್ಷಣೆ ಮಾಡಿಸಿದ್ದಾರೆ.
ಕಲಬುರಗಿ ಎಸ್ಪಿ ಈಶಾ ಪಂತ್ ಮನೆಯಲ್ಲಿ 2 ಹಾವು ಪತ್ತೆ, ರಕ್ಷಣೆ - ಕಲಬುರಗಿ ಎಸ್ಪಿ ಈಶಾ ಪಂತ್
ಮನೆಯಲ್ಲಿ ಕೆಲಸ ಮಾಡುವಾಗ ಹಾವುಗಳನ್ನು ನೋಡಿದ ಎಸ್ಪಿ ಈಶಾ ಪಂತ್, ಸ್ನೇಕ್ ಮಾಸ್ಟರ್ ಪ್ರಶಾಂತ್ ಅವರನ್ನು ಕರೆಸಿ ರಕ್ಷಣೆ ಮಾಡಿಸಿದರು.
ಕಲಬುರಗಿ ಎಸ್ಪಿ ಈಶಾ ಪಂತ್ ಮನೆಯಲ್ಲಿ 2 ಹಾವು ಪತ್ತೆ
ಸುಮಾರು 7 ಅಡಿ ಉದ್ಧದ ಇಂಡಿಯನ್ ರ‍್ಯಾಟ್ ಸ್ನೇಕ್(ಕೆರೆ ಹಾವು) ಇವಾಗಿದ್ದು, ಒಂದು ಹೆಣ್ಣು ಮತ್ತೊಂದು ಗಂಡು ಎಂದು ಪ್ರಶಾಂತ್ ಮಾಹಿತಿ ನೀಡಿದರು. ರಕ್ಷಿಸಿದ ಉರಗಗಳನ್ನು ಇಶಾ ಪಂತ್ ಮುಟ್ಟಿ ಖುಷಿಪಟ್ಟರು. ಸಹಾಯಕ ಪೊಲೀಸ್ ಸಿಬ್ಬಂದಿ ಸೆಲ್ಪಿ ತೆಗೆದುಕೊಂಡರು. ಉರಗಗಳನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಬರಲಾಗಿದೆ. ಹಾವುಗಳು ಕಂಡರೆ ಹಾನಿ ಮಾಡುವುದು, ಕೊಲ್ಲದೆ ನನಗೆ ಕರೆ ಮಾಡಿ ಎಂದು ಪ್ರಶಾಂತ್ ಮನವಿ ಮಾಡಿದರು. ಪ್ರಶಾಂತ್ ಅವರ ಮೊಬೈಲ್ ನಂಬರ್: 7411431430/7411431414
ಇದನ್ನೂ ಓದಿ:ಕ್ರಿಕೆಟ್ ನೆಟ್‌ಗೆ ಸಿಲುಕಿ ಒದ್ದಾಡುತ್ತಿದ್ದ ಹಾವು ರಕ್ಷಣೆ