ಕಲಬುರಗಿ: ನಗರದ ತಾಜ್ ಬಡಾವಣೆಯ ಮುಸ್ಲಿಂ ಸಂಘದ ಪಕ್ಕದ ಚನ್ನವೀರ ನಗರ ಬಡಾವಣೆಯಲ್ಲಿ ಗೌಸ್ ಜಮಾದರ್ ಎಂಬುವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಚೌಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭವಾನಿ ನಗರ ಬಡಾವಣೆ ನಿವಾಸಿ ಜಗದೀಶ್ ಬಿರಾದರ್, ಅನಿಲ್‌ಕುಮಾರ್ ಬಂಧಿತರು. ಕಳೆದ ವರ್ಷ ಡಿಸೆಂಬರ್ 31 ರ ಮಧ್ಯರಾತ್ರಿ ಹೊಸ ವರ್ಷದ ಸಂದರ್ಭದಲ್ಲಿ ಕುಡಿದ ಅಮಲಿನಲ್ಲಿ ಗೌಸ್ ಜಮಾದರ್ ಮತ್ತು ಆರೋಪಿಗಳ ಮಧ್ಯೆ ಜಗಳ ನಡೆದಿದೆ. ಈ ವೇಳೆ ಖದೀಮರು ಗೌಸ್ ಜಮಾದರ್‌ನನ್ನು ಹೊಡೆದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿ ಪರಾರಿಯಾಗಿದ್ದರು.