ಕಲಬುರಗಿ: ಬೆಂಗಳೂರು ಪೊಲೀಸರಿಂದ ಕಲಬುರಗಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಂಡ ಹಿನ್ನೆಲೆ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಗಳಿಸುವಂತೆ ಮಾಡಿದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಅಭಿನಂದನೆ ಸಲ್ಲಿಸಿ ಅಸಮಾಧಾನ ಹೊರಹಾಕಿದ್ದಾರೆ.
ಅಕ್ರಮ ಚಟುವಟಿಕೆಯಲ್ಲಿ ಕಲಬುರಗಿ ಕುಖ್ಯಾತಿ: ಬಿಜೆಪಿ ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಅಭಿನಂದನೆ! - ಅಕ್ರಮ ಚಟುವಟಿಕೆಯಲ್ಲಿ ಕಲಬುರಗಿ ಕುಖ್ಯಾತಿ
ಅಪಾರ ಪ್ರಮಾಣದ ಗಾಂಜಾ ದಾಸ್ತಾನಿಗೆ ಅವಕಾಶ ಮಾಡಿಕೊಟ್ಟು, ಕಲಬುರಗಿಯನ್ನು ಅಕ್ರಮ ಚಟುವಟಿಕೆಗಳ ತಾಣ ಮಾಡಿ ಇಡೀ ದೇಶದಲ್ಲೇ ಜಿಲ್ಲೆಯ ಹೆಸರನ್ನು (ಕು) ಖ್ಯಾತಿಗೊಳಿಸುತ್ತಿರುವ ಕರ್ನಾಟಕ ಬಿಜೆಪಿಗೆ ಅಭಿನಂದನೆಗಳು ಎಂದು ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಅಕ್ರಮ ಚಟುವಟಿಕೆಯಲ್ಲಿ ಕಲಬುರಗಿ ಕುಖ್ಯಾತಿ, ಬಿಜೆಪಿ ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಅಭಿನಂದನೆ
ಈ ಕುರಿತು ಟ್ವೀಟ್ ಮಾಡಿರುವ ಅವರು, ಅಪಾರ ಪ್ರಮಾಣದ ಗಾಂಜಾ ದಾಸ್ತಾನಿಗೆ ಅವಕಾಶ ಮಾಡಿಕೊಟ್ಟು, ಕಲಬುರಗಿಯನ್ನು ಅಕ್ರಮ ಚಟುವಟಿಕೆಗಳ ತಾಣ ಮಾಡಿ ಇಡೀ ದೇಶದಲ್ಲೇ ಜಿಲ್ಲೆಯ ಹೆಸರನ್ನು (ಕು) ಖ್ಯಾತಿಗೊಳಿಸುತ್ತಿರುವ ಕರ್ನಾಟಕ ಬಿಜೆಪಿಗೆ ಅಭಿನಂದನೆಗಳು ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಕಲಬುರಗಿ ಜನತೆ ನಿಮ್ಮ ಈ ಸಾಧನೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಅವರು ಕುಟುಕಿದ್ದಾರೆ.