ಕಲಬುರಗಿ: ತಾಲಿಬಾನ್ ಸಂಸ್ಕೃತಿ ಪರ ಮಾತಾಡುವವರು ನೈಜ ಭಾರತಿಯ ಮತ್ತು ನೈಜ ಮುಸ್ಲಿಂನಾಗೋದಿಲ್ಲ ಎಂದು ಶಾಸಕ ಯು. ಟಿ. ಖಾದರ್ ಖಾರವಾಗಿಯೇ ಹೇಳಿದ್ದಾರೆ.
ತಾಲಿಬಾನ್ ಸಂಸ್ಕೃತಿ ಪರ ಮಾತನಾಡುವವರು ನೈಜ ಮುಸ್ಲಿಂ ಅಲ್ಲ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಧರ್ಮದಲ್ಲಿಯೂ ಕೂಡ ಆ ರೀತಿಯ ಸಂದೇಶ ಇಲ್ಲ, ಎಲ್ಲ ಧರ್ಮ ಶಾಂತಿ ಸಹಬಾಳ್ವೆಯಿಂದ ಬದುಕಲು ಹೇಳಿವೆ. ತಾಲಿಬಾನ್ ಸಂಸ್ಕೃತಿ ನಮ್ಮ ತತ್ವ ಆದರ್ಶಗಳ ವಿರುದ್ದವಾದಂತಹ ಸಂಸ್ಕೃತಿ.
ಶರಿಯಾ ಕಾನೂನಿನ ಆಡಳಿತ ಸಹಿಸೋದಕ್ಕೆ ಸಾಧ್ಯವಿಲ್ಲ. ಯಾವ ಧರ್ಮವು ಕೂಡ ಈ ರೀತಿ ಆಚರಿಸೋದಕ್ಕೆ ಹೇಳಿಲ್ಲ. ಇದು ಜಾಸ್ತಿ ದಿನ ಬದುಕುಳಿಯುತ್ತೆ ಎಂದು ಹೇಳೊಕೆ ಆಗೋದಿಲ್ಲ ಎಂದು ಹೇಳಿದರು.
ತಾಲಿಬಾನ್ ಭಾರತ ದೇಶದ ಪಕ್ಕದಲ್ಲಿ ಬಂದಿರೋದ್ರಿಂದ ನಾವು ಕೂಡಾ ಬಹಳ ಎಚ್ಚರದಿಂದ ಇರಬೇಕಾಗುತ್ತೆ. ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರು ಏನ್ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುವುದನ್ನು ಕಾಯ್ದು ನೋಡಬೇಕು. ಕಟ್ಟೆಚ್ಚರದಿಂದ ಇರಬೇಕಾದ ಅಗತ್ಯವಿದೆ ಎಂದು ಖಾದರ್ ಎಚ್ಚರಿಸಿದರು.