ಕರ್ನಾಟಕ

karnataka

By

Published : Nov 29, 2019, 12:55 PM IST

ETV Bharat / city

ಬೇಳೆ ಮಿಲ್​ಗಳನ್ನು ಆಗ್ರೋ ಇಂಡಸ್ಟ್ರಿ ಎಂದು ಪರಿಗಣಿಸಿ:  ಕೇಂದ್ರ ಸಚಿವರಿಗೆ ಉಮೇಶ್​ ಜಾಧವ್​ ಮನವಿ

ದಾಲ್​​ ಮಿಲ್​ಗಳನ್ನು ಆಗ್ರೋ ಇಂಡಸ್ಟ್ರಿ ಎಂದು ಪರಿಗಣಿಸುವಂತೆ ಸಂಸದ ಉಮೇಶ್ ಜಾಧವ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ‌ ಮಾಡಿಕೊಂಡಿದ್ದಾರೆ.

Umesh Jadhav appeals to Union Minister
ಕೇಂದ್ರ ಸಚಿವರಿಗೆ ಉಮೇಶ್​ ಜಾಧವ್​ ಮನವಿ

ಕಲಬುರಗಿ:ದಾಲ್​​ ಮಿಲ್​ಗಳನ್ನು ಆಗ್ರೋ ಇಂಡಸ್ಟ್ರಿ ಎಂದು ಪರಿಗಣಿಸುವಂತೆ ಸಂಸದ ಉಮೇಶ್ ಜಾಧವ್ ಅವರು ಕೇಂದ್ರ ಭೂಸಾರಿಗೆ ಮತ್ತು ಭಾರಿ ಕೈಗಾರಿಕೆ ,ಸಾರ್ವಜನಿಕ ಉದ್ದಿಮೆ ಸಚಿವಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ‌ ಸಲ್ಲಿಸಿದ್ದಾರೆ.

ಕಲಬುರಗಿ ತೊಗರಿ ಕಣಜದ ನಾಡು ಎಂದೇ ಪ್ರಸಿದ್ಧಿ ಹೊಂದಿದೆ. ಕಲ್ಯಾಣ ಕರ್ನಾಟಕ ಭಾಗದ ರೈತರು ಕೃಷಿಯಲ್ಲಿ ತೂಗರಿ ಬೆಳೆಯನ್ನೇ ಹೆಚ್ಚಾಗಿ ಬೆಳೆಯುತ್ತಾರೆ. ಆದ್ದರಿಂದ ದಾಲ್ ಮಿಲ್​​ಗಳನ್ನು ಆಗ್ರೋ ಇಂಡಸ್ಟ್ರಿ ಎಂದು ಪರಿಗಣಿಸಿದರೆ ಈ ಭಾಗದ (ಕಲ್ಯಾಣ ಕರ್ನಾಟಕ) ಉದ್ದಿಮೆದಾರರಿಗೆ ಹಾಗೂ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.

ಮಾರುಕಟ್ಟೆಯಲ್ಲಿನ ನಿಯಮಗಳ ಬದಲಾವಣೆಯಿಂದ ದಾಲ್​​ಮಿಲ್​​ಗಳು ನಷ್ಟಕ್ಕೆ ಸಿಲುಕಿವೆ. ಈಗಾಗಲೇ ಅನೇಕ ದಾಲ್​ಮಿಲ್​ಗಳು ಮುಚ್ಚಿವೆ. ರೈತರು ಹಾಗೂ ವ್ಯಾಪಾರಿಗಳು ನಷ್ಟದಲ್ಲಿದ್ದಾರೆ. ಅದಕ್ಕಾಗಿ ದಾಲ್​ಮಿಲ್​ಗಳನ್ನು (agro base) ಇಂಡಸ್ಟ್ರಿ ಎಂದು ಗುರುತಿಸಿ ಅದಕ್ಕೆ ತಕ್ಕ ಸಾಲ (ಬಡ್ಡಿ ರಹಿತ) ಕೊಡಬೇಕಾಗಿ ಎಂದು ಸಚಿವರಿಗೆ ತಿಳಿಸಿರುವುದಾಗಿ ಜಾಧವ್​ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ABOUT THE AUTHOR

...view details