ಕರ್ನಾಟಕ

karnataka

ETV Bharat / city

ಕಾರಿನ ಗಾಜು ಒಡೆದು 3.85 ಲಕ್ಷ ರೂ. ಹಣ ಎಗರಿಸಿದ ಖದೀಮರು.. ವೀಡಿಯೊ ನೋಡಿದ್ರೆ ಶಾಕ್​ ಆಗ್ತೀರ - Kalaburagi

ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಹಣ ಕದ್ದು ಕಳ್ಳರು ಪರಾರಿಯಾಗಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಾರಿನ ಗಾಜು ಒಡೆದು ಕಳ್ಳತನ

By

Published : May 16, 2019, 3:38 PM IST

ಕಲಬುರಗಿ: ಸಿಟಿ ಬಸ್ ನಿಲ್ದಾಣದ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು, ಒಳಗಿದ್ದ 3.85 ಲಕ್ಷ ರೂ. ನಗದನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ಶಹಬಾದ್ ತಾಲೂಕಿನ ಗೋಳಾ (ಕೆ) ಗ್ರಾಮದ ಕ್ಲಾಸ್ ಒನ್ ಕಂಟ್ರಾಕ್ಟರ್ ಮಾಣಿಕ ಪಾಟೀಲ್ ಎಂಬುವರಿಗೆ ಸೇರಿದ ಹಣ ಇದಾಗಿದೆ. ಅವರು ತಮ್ಮ ವೃತ್ತಿ ಬಳಕೆಗಾಗಿ ಕರ್ನಾಟಕ ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ತಮ್ಮ ಸ್ವಿಫ್ಟ್​ ಕಾರಿನಲ್ಲಿ ತೆರಳಿದ್ದರು‌. ಬ್ಯಾಂಕಿನಿಂದಲೇ ಸಂಚು ರೂಪಿಸಿದ ಇಬ್ಬರು ಖದೀಮರು, ಮಾಣಿಕ ಪಾಟೀಲ್ ಗಮನಕ್ಕೆ ಬರದಂತೆ ಹಿಂಬಾಲಿಸಿದ್ದಾರೆ. ಕಾರ್ ಪಾರ್ಕ್ ಮಾಡಿ ಮಾಣಿಕ್ ಪಾಟೀಲ್ ಹೊರಗಡೆ ಹೋಗಿ ಬರುವಷ್ಟರಲ್ಲಿ ಕಾರಿನ ಗಾಜು ಒಡೆದು, ಅಲ್ಲಿದ್ದ ಹಣದ ಬ್ಯಾಗ್ ಕದ್ದು ಪರಾರಿಯಾಗಿದ್ದಾರೆ.

ಕಾರಿನ ಗಾಜು ಒಡೆದು ಕಳ್ಳತನ

ಇನ್ನು ಬ್ಯಾಂಕ್​ನಲ್ಲಿ ಮಾಣಿಕ್ ಪಾಟೀಲ್ ಹಣ ಡ್ರಾ ಮಾಡುವುದನ್ನು ಗಮನಿಸುತ್ತಿರುವ ದೃಶ್ಯ ಹಾಗೂ ಕಾರ್ ಪಾರ್ಕ್ ಮಾಡಿದಾಗ ದ್ವಿಚಕ್ರ ವಾಹನದಲ್ಲಿ ಬಂದು ತಮ್ಮ ಕೈಚಳಕ ತೋರಿದ ದೃಶ್ಯ ಸಿಸಿಟಿವಿಗಳಲ್ಲಿ ಸೆರೆಯಾಗಿವೆ. ಸ್ಥಳಕ್ಕೆ ಎಸ್ಪಿ ಯಡಾ ಮಾರ್ಟಿನ್ ಭೇಟಿ ನೀಡಿ ಪರೀಶಿಲನೆ ಮಾಡಿದ್ದು, ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಕಳ್ಳರಿಗಾಗಿ ಜಾಲ ಬಿಸಿದ್ದಾರೆ‌. ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

Kalaburagi

ABOUT THE AUTHOR

...view details