ಕಲಬುರಗಿ: ಜಿ.ಪಂ-ತಾ.ಪಂ ಕ್ಷೇತ್ರಗಳ ಮೀಸಲಾತಿ ಪ್ರಕಟವಾದ ಬೆನ್ನಲ್ಲೇ ಹಳ್ಳಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಟಿಕೆಟ್ ಪಡೆಯಲು ರಾಜಕೀಯ ನಾಯಕರಿಗೆ ದುಂಬಾಲು ಬೀಳುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್‌ಗಾಗಿ ಇಲ್ಲೊಬ್ಬ ಕಾರ್ಯಕರ್ತ ತನ್ನ ರಕ್ತದಿಂದ ಪತ್ರ ಬರೆದು ಮನವಿ ಮಾಡುವ ಮೂಲಕ ಗಮನ ಸೆಳೆದಿದ್ದಾನೆ.
ಅಫಜಲಪುರ ತಾಲೂಕಿನ ಮಣ್ಣೂರ (ಕರಜಗಿ) ಜಿ.ಪಂ ಕ್ಷೇತ್ರಕ್ಕೆ ತಾ.ಪಂ ಮಾಜಿ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಒತ್ತಾಯಿಸಿ ಕರಜಗಿ ಗ್ರಾಮದ ಸಿದ್ದು ಖೇಡ ಎಂಬಾತ ಶಾಸಕರಿಗೆ ರಕ್ತದಿಂದ ಪತ್ರ ಬರೆದು ಮನವಿ ಮಾಡಿದ್ದಾನೆ.