ಕರ್ನಾಟಕ

karnataka

ETV Bharat / city

ರಾಜ್ಯ ಸರ್ಕಾರ ರೈತರನ್ನು ನಿರ್ಲಕ್ಷಿಸಿದೆ: ಶರಣಪ್ರಕಾಶ್​ ಪಾಟೀಲ್​ - ಬಿಜೆಪಿ ಸರ್ಕಾರಕ್ಕೆ ರೈತರ ಕಲ್ಯಾಣ ಬೇಕಿಲ್ಲ

ಹೆಸರು ಕಾಳಿಗೆ ಸೂಕ್ತ ಬೆಂಬಲ ಬೆಲೆ ನೀಡಿ, ರಾಜ್ಯ ಸರ್ಕಾರ ಖರೀದಿ ಕೇಂದ್ರ ಆರಂಭಿಸಬೇಕು. ಇಲ್ಲದಿದ್ದಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಜಿ ಸಚಿವ ಶರಣಪ್ರಕಾಶ್​ ಪಾಟೀಲ್​ ಎಚ್ಚರಿಸಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ರೈತರ ಕಲ್ಯಾಣ ಬೇಕಿಲ್ಲ ಎಂದ ಶರಣಪ್ರಕಾಶ ಪಾಟೀಲ

By

Published : Sep 6, 2019, 7:49 PM IST

ಕಲಬುರಗಿ: ಹೆಸರು ಬೆಳೆ ಕಟಾವಾಗಿ, ಮಾರುಕಟ್ಟೆಗೆ ಬಂದರೂ ರಾಜ್ಯ ಸರ್ಕಾರ ಮಾತ್ರ ಇನ್ನೂ ಖರೀದಿ ಕೇಂದ್ರ ಆರಂಭಿಸದೆ ರೈತರನ್ನು ನಿರ್ಲಕ್ಷಿಸಿದೆ ಎಂದು ಮಾಜಿ ಸಚಿವ ಶರಣಪ್ರಕಾಶ್​ ಪಾಟೀಲ್​​ ಆರೋಪಿಸಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ರೈತರ ಕಲ್ಯಾಣ ಬೇಕಿಲ್ಲ ಎಂದ ಶರಣಪ್ರಕಾಶ್​ ಪಾಟೀಲ್​

ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರಕ್ಕೆ ರೈತರ ಕಲ್ಯಾಣ ಬೇಕಿಲ್ಲ. ಕೇಂದ್ರ ಸರ್ಕಾರ ಹೆಸರಿಗೆ ಪ್ರತಿ ಕ್ವಿಂಟಲ್​ಗೆ 7,025 ರೂಪಾಯಿ ಬೆಂಬಲ ಬೆಲೆ ಘೋಷಿಸಿದೆ. ಆದ್ರೆ ಮಾರುಕಟ್ಟೆಯಲ್ಲಿ ಹೆಸರುಕಾಳು ಬೆಲೆ 5 ಸಾವಿರ ರೂಪಾಯಿಗೆ ಕುಸಿದಿದೆ ಎಂದರು. ಕೂಡಲೇ ರಾಜ್ಯ ಸರ್ಕಾರ ಮಾರುಕಟ್ಟೆಗೆ ಸಂಬಂಧಿಸಿದಂತೆ ಮಧ್ಯಪ್ರವೇಶ ಮಾಡಬೇಕು. ಕೇಂದ್ರದ ಬೆಂಬಲ ಬೆಲೆ ಜೊತೆಗೆ ರಾಜ್ಯದ ಪ್ರೋತ್ಸಾಹ ಧನ ಸೇರಿ ಪ್ರತಿ ಕ್ವಿಂಟಲ್ ಗೆ 7500 ರೂಪಾಯಿಗೆ ಹೆಸರು ಖರೀದಿಸಬೇಕು. ಇಲ್ಲದಿದ್ದಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಶರಣಪ್ರಕಾಶ್​ ಪಾಟೀಲ್​ ಎಚ್ಚರಿಕೆ ರವಾನಿಸಿದ್ದಾರೆ.

ABOUT THE AUTHOR

...view details